Breaking Newsಚಿಕ್ಕಮಗಳೂರುಜಿಲ್ಲಾ ಸುದ್ದಿ

ಅಕ್ರಮ ವಲಸಿಗರನ್ನು ಹೊರಗಟ್ಟಲಾಗುವುದು: ಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಪ್ರೆಸ್ ಕ್ಲಬ್​​​ನಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿ, ಬೆಂಗಳೂರಲ್ಲಿ ಅಕ್ರಮ ವಲಸಿಗರ ಭಾರೀ ಸಮಸ್ಯೆ ಇದೆ. ಬಂದವರು ಬೇಕಂತಲೇ ಸಣ್ಣ ಪುಟ್ಟ ಕೇಸ್‌ ಹಾಕಿಸಿಕೊಳ್ಳುತ್ತಾರೆ. ಕೇಸು ಮುಗಿಯುವ ವರೆಗೂ ಹೊರಗೆ ಹೋಗುವ ಹಾಗಿಲ್ಲ. ವೀಸಾ ಅವಧಿ ಮುಗಿದವರನ್ನು ಅರೆಸ್ಟ್‌ ಮಾಡಬೇಕಾಗುತ್ತದೆ. ಇಲ್ಲವೇ ಹೊರಕ್ಕೆ ಕಳುಹಿಸಬೇಕಾಗುತ್ತದೆ ಎಂದರು.

ಸಂವಾದದಲ್ಲಿ ಉಪಸಭಾಪತಿ ಎಂ.ಕೆ ಪ್ರಾಣೇಶ್‌, ಶಾಸಕ ಸಿ.ಟಿ.ರವಿ, ಎಂಎಲ್‌ಸಿ ಎಸ್‌ ಎಲ್‌ ಬೋಜೇಗೌಡ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button