Breaking NewsLatestವಿದೇಶ

ಕಾಬೂಲ್ ನಗರದ ಮೇಲೆ ಕಣ್ಣಿಟ್ಟ ತಾಲಿಬಾನ್

ಕಾಬೂಲ್: ಅಘಘಾನಿಸ್ತಾನದ ಹಲವು ನಗರಗಳನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಈಗ ರಾಜಧಾನಿ ಕಾಬೂಲ್ ನತ್ತ ಕಣ್ಣಿಟ್ಟಿದೆ. ಆ ಮೂಲಕ ಇಡೀ ಅಫಘಾನಿಸ್ತಾನದಲ್ಲಿ ತನ್ನ ಹತೋಟಿ ಸಾಧಿಸಲು ಹಪಹಪಿಸುತ್ತಿದೆ.

ಈಗಾಗಲೇ ಲೋಗ್ಹಾರ್ ಪ್ರಾಂತ್ಯದ ರಾಜಧಾನಿ ಪುಲ್ಲಿಆಲಂ ನಗರ ತಾಲಿಬಾನ್ ವಶವಾಗಿದೆ. ಇಲ್ಲಿಂದ ಕೇವಲ 30 ಮೈಲಿ ದೂರದಲ್ಲಿ ರಾಜಧಾನಿ ಕಾಬೂಲ್ ನಗರವಿದ್ದು, ಈಗ ಇದರತ್ತ ದೃಷ್ಟಿ ನೆಟ್ಟಿದ್ದಾರೆ.

ಕಳೆದ 20 ವರ್ಷಗಳ ಹಿಂದೆ ಸೆ.11ರಂದು ಭೀಕರ ದಾಳಿ ನಡೆಸಿ ಇಡೀ ಜಗತ್ತನ್ನ್ನೇ ನಡುಗಿಸಿತ್ತು. ಮುಂದಿನ ತಿಂಗಳ 11ರಂದು ವಿಧ್ವಂಸಕ ಕೃತ್ಯಗಳನ್ನು ನಡೆಸಬಹುದೆಂಬ ಆತಂಕ ಅಮೆರಿಕಕ್ಕೆ ಉಂಟಾಗಿದೆ. ಕಾಬೂಲ್ ಗೆ ತಾಲಿಬಾನಿಗಳು ಲಗ್ಗೆಯಿಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರನ್ನು ಸ್ಥಳಾಂತರಿಸಲು ಅಮೆರಿಕ ಮುಂದಾಗಿದೆ.

ಅಮೆರಿಕ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಆದೇಶವನ್ನು ಅಧ್ಯಕ್ಷ ಜೋ ಬೈಡೆನ್ ಹೊರಡಿಸಿದ್ದು, ಇದಕ್ಕೂ ಮೊದಲೇ ಸೈನ್ಯ ಮತ್ತು ಸೇನಾ ವಿಭಾಗಗಳು ತಾಲಿಬಾನಿಗಳಿಗೆ ಶರಣಾಗಿದ್ದವು. ಈ ಬೆಳವಣಿಗೆಯಲ್ಲಿ ಬಂಡುಕೋರರು ಸೈನ್ಯದ ಯುದ್ಧವಾಹನಗಳು, ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ತಾಲಿಬಾನ್ ಅಟ್ಟಹಾಸ ಜೋರಾಗಿದೆ.

Related Articles

Leave a Reply

Your email address will not be published. Required fields are marked *

Back to top button