ಚಿಕ್ಕಮಗಳೂರು

ಯಗಚಿ ನದಿಪಾತ್ರದಲ್ಲಿ ಭೂ ಒತ್ತುವರಿ ತೆರವಿಗೆ ಕ್ರಮ

ಚಿಕ್ಕಮಗಳೂರು: ಯಗಚಿ ನದಿಪಾತ್ರದಲ್ಲಿ ಭೂ ಒತ್ತುವರಿಯಾಗಿದ್ದು, ಇದರ ಸರ್ವೆ ನಡೆಸಿ, ಒತ್ತುವರಿದಾರರಿಗೆ ನೊಟೀಸ್ ನೀಡುವ ಮೂಲಕ ಕಾನೂನು ಬದ್ಧವಾಗಿ ತೆರವುಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ ಆನಂದ್ ತಿಳಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಗರಸಭೆ, ಸಣ್ಣ ನೀರಾವರಿ, ಅರಣ್ಯ ಒಳಗೊಂಡಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಭೂ ಒತ್ತುವರಿ ಮಾಡಿ ಕಟ್ಟಡ, ಶೆಡ್ಗಳನ್ನು ನಿರ್ಮಾಣಗೊಳಿಸಿದ್ದರೆ ಅವರಿಗೆ ಪ್ರಾಧಿಕಾರದಿಂದ ನೊಟೀಸ್ ನೀಡಿ ತೆರವು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಒತ್ತುವರಿಯನ್ನು ಎಷ್ಟೇ ಪ್ರಭಾವಿಗಳು ಮಾಡಿದ್ದರೂ ಕಾನೂನು ಪ್ರಕಾರ ತೆರವು ಕಾರ್ಯಾಚರಣೆ ನಡೆಸಲಾಗುವುದು. ರಾಮನಹಳ್ಳಿಯಲ್ಲಿ ಭೂ ಒತ್ತುವರಿ ಮಾಡಿ ಹೈಟೆನ್ಶನ್ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಸದಸ್ಯ ಶಿವಕುಮಾರ್, ನಗರಸಭೆ ಇಂಜಿನಿಯರ್ ಚಂದನ್ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button