ಸಿದ್ದರಾಮಯ್ಯ ಟೀಕೆ ಮಾಡೋದು ಬಿಟ್ಟು ಸಲಹೆ ಕೊಡಲಿ : ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ: ಸಿದ್ದರಾಮಯ್ಯ ಅವರಿಗೆ ಪಾಪ ತುರ್ತಾಗಿ ಮುಖ್ಯಮಂತ್ರಿ ಆಗಬೇಕಾಗಿದೆ. ಆದರೆ ಅವಕಾಶವಿಲ್ಲ, ಈ ದೇಶದಲ್ಲಿ ಕಾಂಗ್ರೆಸ್ ಅವಸಾನದ ಕಾಲದಲ್ಲಿದೆ ಎಂದು ಸಿದ್ದರಾಮಯ್ಯ ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಐದು ರಾಜ್ಯಗಳ ಚುನಾವಣೆ ಅತ್ಯಂತ ಕಳಪೆಯಾಗಿದೆ ಅಂತ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ವಿನಾಕಾರಣ ದೇಶದ ಪ್ರಧಾನಿಗಳನ್ನಾಗಲಿ,
ರಾಜ್ಯದ ಮುಖ್ಯಮಂತ್ರಿ ಅವರನ್ನಾಗಲಿ ವಿನಾಕಾರಣ ಟೀಕೆ ಮಾಡಬಾರದು ಎಂದರು.
ಸಿದ್ದರಾಮಯ್ಯ ಟೀಕೆ ಮಾಡೋದನ್ನು ಬಿಟ್ಟು ಸಲಹೆ ಸೂಚನೆಗಳನ್ನು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೊಡಬೇಕು.ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತೇವೆ. ಬರೀ ಟೀಕೆ ಮಾಡುವುದು ಗುರಿ. ಆದರೆ, ಟೀಕೆ ಮಾಡುವುದಕ್ಕೇ ವಿರೋಧ ಪಕ್ಷನಾ ಎಂದು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
https://24x7livekannada.com/a-solder-set-off-from-pune-to-kerala-on-his-bike-to-marriage/
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಪದೆ ಪದೇ ಹೇಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ಬದಲಾವಣೆ ಗಾಳಿ ಸುದ್ದಿ. ಮಾಧ್ಯಮಗಳಿಂದ ಗಾಳಿ ಸುದ್ದಿಗೆ ರೆಕ್ಕೆ ಪುಕ್ಕ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟದಲ್ಲಿ, ಪ್ರಕೃತಿ ವಿಕೋಪದಲ್ಲಿ ಯಡಿಯೂರಪ್ಪ ಸರಕಾರ ಅತ್ಯುತ್ತಮ ಕೆಲಸ ಮಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಕೊರೊನಾ ಸಂಕಷ್ಟ ದಲ್ಲಿ ಅನೇಕ ನೆರವು ನೀಡಿದ್ದಾರೆ. ಸದ್ಯ ಆರ್ಥಿಕ ಸಂಕಷ್ಟದಲ್ಲೂ ನೆರವು ನೀಡುತ್ತಿದ್ದಾರೆ ಎಂದರು.
