Breaking Newsಜಿಲ್ಲಾ ಸುದ್ದಿಬೆಳಗಾವಿ

ಶಶಿಕಲಾ ನಟರಾಜನ್ ಗೆ ಜೈಲಿನಲ್ಲಿ ರಾಜಾತಿಥ್ಯ ಆರೋಪ: ಹಿಂಡಲಗಾ ಜೈಲು ಅಧಿಕಾರಿಯ ಮನೆ ಮೇಲೆ ACB ದಾಳಿ

ಬೆಳಗಾವಿ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆಯಾಗಿ ಗುರುತಿಸಿಕೊಂಡಿದ್ದ ಶಶಿಕಲಾ ನಟರಾಜನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀದಿದ್ದಾರೆ ಎಂದು ಐಪಿಎಸ್ ಅಧಿಕಾರಿ ಡಿ ರೂಪಾ 2018 ರಲ್ಲಿ ದೂರು ನೀಡಿದ್ದರು. 2018 ರಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಕೃಷ್ಣಕುಮಾರ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಸದ್ಯ ವರ್ಗಾವಣೆಗೊಂಡು ಬೆಳಗಾವಿ ಹಿಂಡಲಗಾ ಜೈಲು ಅಧೀಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರ ಮನೆ ಮೇಲೆ ಈಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

ರಾಜಾತಿಥ್ಯ ನೀಡಿದ ಆರೋಪದ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಂತೆ ಕಾಣುತ್ತಿದೆ, ಸದ್ಯ ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣಕುಮಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನ ಪಕ್ಕದ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ವಾಸವಿರುವ ಕೃಷ್ಣಕುಮಾರ ನಿವಾಸದ ಮೇಲೆ ಬೆಂಗಳೂರಿನಿಂದ ಬಂದಿದ್ದ ಐವರು ಎಸಿಬಿ ಅಧಿಕಾರಿಗಳು ಹಾಗೂ ಸ್ಥಳೀಯ ಎಸಿಬಿ ತಂಡ ಇಂದು ಬೆಳಗ್ಗೆ ದಾಳಿ ಮಾಡಿ ಪರಿಶೀಲನೆ ಕೈಗೊಂಡಿದ್ದರು

ಸದ್ಯ ಎಸಿಬಿ ದಾಳಿಯಲ್ಲಿ ತನಿಖೆಗೆ ಸಹಾಯವಾಗುವಂತಹ ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಬಗ್ಗೆ ಯಾವುದೇ‌ ದಾಖಲೆಗಳು ಲಭ್ಯವಾಗಿಲ್ಲಾ ಎನ್ನಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button