ಮೈಸೂರು

ಸಕ್ಕರೆ ಕಾರ್ಖಾನೆ ಆವರಣದಲ್ಲಿ ಲಾರಿ ಚಾಲಕ ಸಾವು; ಪರಿಹಾರಕ್ಕಾಗಿ ಪ್ರತಿಭಟನೆ

ನಂಜನಗೂಡು: ಬನ್ನಾರಿ ಅಮ್ಮನ್ನ್‌ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ರಾತ್ರಿ ಸಾವಿಗೀಡಾದ ಲಾರಿ ಚಾಲಕನಿಗೆ ಪರಿಹಾರ ನೀಡಬೇಕು ಎಂದು ಚಾಲಕನ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಪರಿಣಾಮವಾಗಿ ಕಬ್ಬನ್ನು ತುಂಬಿ ಬಂದಿದ್ದ ಲಾರಿಗಳು ಕಾರ್ಖಾನೆ ಪ್ರವೇಶಿಸಲಾಗದೇ ಹೊರಗಡೆ ಸಾಲಾಗಿ ನಿಂತಿವೆ.

ಲಾರಿ ಚಾಲಕ ಭಾನುವಾರ ರಾತ್ರಿ ಕಾರ್ಖಾನೆ ಆವರಣದಲ್ಲಿ ಸಾವಿಗೀಡಾಗಿದ್ದ. ಲಾರಿ ಒಳಗಡೆಯೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button