Breaking NewsLatestರಾಷ್ಟ್ರೀಯವಿದೇಶ

ಲಕ್ಷಕ್ಕೂ ಹೆಚ್ಚು ಗ್ರೀನ್ ​ಕಾರ್ಡ್​ಗಳು ವ್ಯರ್ಥವಾಗುವ ಅಪಾಯ; ಅಮೆರಿಕಾದಲ್ಲಿನ ಭಾರತೀಯ ಉದ್ಯೋಗಿಗಳಿಗೆ ತೀವ್ರ ಆತಂಕ

ವಾಷಿಂಗ್ಟನ್: ಉದ್ಯೋಗಾಧಾರಿತ ಸುಮಾರು ಒಂದು ಲಕ್ಷ ಗ್ರೀನ್ ಕಾರ್ಡ್‌ಗಳು ಇನ್ನೆರಡೇ ತಿಂಗಳಲ್ಲಿ ನಿರುಪಯುಕ್ತವಾಗುವ ಅಪಾಯದಲ್ಲಿದ್ದು, ಕಾನೂನುಬದ್ಧ ಶಾಶ್ವತ ನಿವಾಸಕ್ಕಾಗಿ ದಶಕಗಳಿಂದ ಕಾಯುತ್ತಿರುವ ಭಾರತೀಯ ಐಟಿ ವೃತ್ತಿಪರರ ಆತಂಕಕ್ಕೆ ಕಾರಣವಾಗಿದೆ.

ಗ್ರೀನ್ ಕಾರ್ಡ್, ವಲಸಿಗರಿಗೆ ಅಧಿಕೃತವಾಗಿ ಖಾಯಂ ನಿವಾಸಕ್ಕೆ ನೀಡುವ ದಾಖಲೆಯಾಗಿದ್ದು, ಅಮೆರಿಕಾದಲ್ಲಿ ಶಾಶ್ವತವಾಸದ ಸವಲತ್ತನ್ನು ಒದಗಿಸುತ್ತದೆ. ಈ ವರ್ಷದ ಖೋಟಾದಲ್ಲಿ ಉದ್ಯೋಗದ ಆಧಾರದಲ್ಲಿ ವಲಸಿಗರಿಗೆ 2,61,500 ಗ್ರೀನ್ ಕಾರ್ಡ್​ಗಳನ್ನು ನೀಡಲಾಗುತ್ತಿದ್ದು, ಭಾರತೀಯ ಉದ್ಯೋಗಿಗಳಿಗೆ ಸಾಮಾನ್ಯವಾಗಿ ನೀಡುವ 1 ಲಕ್ಷ 40 ಸಾವಿರ ಕಾರ್ಡ್​ಗಳಿಗಿಂತ ಹತ್ತಿರ ಹತ್ತಿರ ದುಪ್ಪಟ್ಟು. ಆದರೆ ಈ ಸಂಬಂಧದ ವೀಸಾಗಳು ಸೆಪ್ಟೆಂಬರ್ 30ರೊಳಗೆ ಸಿಗದಿದ್ದಲ್ಲಿ ಅವು ವ್ಯರ್ಥವಾಗಲಿವೆ ಎನ್ನಲಾಗಿದೆ.

ಯುಎಸ್ ಸಿಟಿಜನ್​ಷಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್​ಸಿಐಎಸ್) ಅಥವಾ ಬೈಡನ್ ಆಡಳಿತ ಅಗತ್ಯ ಕ್ರಮ ತೆಗೆದುಕೊಳ್ಲದೇ ಹೋದಲ್ಲಿ ಒಂದು ಲಕ್ಷಕ್ಕೂ ಅಧಿಕ ಗ್ರೀನ್ ಕಾರ್ಡ್​ಗಳು ಹೀಗೆ ವ್ಯರ್ಥವಾಗುವ ಅಪಾಯ ಎದುರಾಗಿದೆ.

ಆದರೆ ಈ ಸಂಬಂಧ ಎದ್ದಿರುವ ಪ್ರಶ್ನೆಗೆ ಶ್ವೇತಭವನ ಈವರೆಗೂ ಪ್ರತಿಕ್ರಿಯಿಸಿಲ್ಲ ಎಂದು ತಿಳಿದುಬಂದಿದೆ.

ಈ ಮಧ್ಯೆ, ಅಮೆರಿಕಾದಲ್ಲಿ ವಾಸವಾಗಿರುವ ಭಾರತ ಮತ್ತು ಚೀನಾದ 125 ಮಂದಿ ಗ್ರೀನ್ ಕಾರ್ಡ್​ಗಳು ವ್ಯರ್ಥವಾಗದಂತೆ ತಡೆಯಲು ಅಗತ್ಯ ಕ್ರಮಕ್ಕೆ ಸೂಚಿಸಲು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button