Breaking Newsಜಿಲ್ಲಾ ಸುದ್ದಿ

ಕಲ್ಯಾಣ ಕರ್ನಾಟಕ ಜನರು ಎರಡನೇ ದರ್ಜೆ ನಾಗರೀಕರಂತಾಗಿದೆ: ಈಶ್ವರ್ ಖಂಡ್ರೆ

ಕಲಬುರ್ಗಿ: ರಾಜ್ಯದಲ್ಲಿ ಕಲ್ಯಾಣ ಕರ್ನಾಟಕದ ಜನ ಎರಡನೇ ದರ್ಜೆಯ ನಾಗರೀಕರಾಗಿ ಬದುಕುವಂತಾಗಿದೆ ಅಂತ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರಾದ ಬಸವರಾಜ ಬೊಮ್ಮಾಯಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಲ್ಲಿನ ಜನ ಇಟ್ಟಿದ್ದರು. ಆದರೆ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದವರನ್ನು ಮತ್ತೆ ಕಡೆಗಣಿಸಲಾಗಿದೆ. ಕಲಬುರರ್ಗಿ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದರು.

ಈ ಭಾಗದ ಜನರ ಮೇಲೆ ಯಾಕೆ ಇಷ್ಟು ಮಲತಾಯಿ ಧೋರಣೆ ಬಿಜೆಪಿ ಸರ್ಕಾರ ತೋರುತ್ತಿದೆ ಗೊತ್ತಿಲ್ಲ, ಸರ್ಕಾರದ ನಡೆ ನೋಡಿದರೆ ಈ ಭಾಗದ ರಾಜ್ಯದಲ್ಲಿ ಎರಡನೇ ದರ್ಜೆ ನಾಗರೀಕರಾಗಿ ಜೀವನ ನಡೆಸುವ ಸ್ಥೀತಿ ನಿರ್ಮಾಣವಾಗಿದೆ ಅಂತ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ‌.

Spread the love

Related Articles

Leave a Reply

Your email address will not be published. Required fields are marked *

Back to top button