Breaking NewsLatestರಾಷ್ಟ್ರೀಯವಾಣಿಜ್ಯ

ಫ್ಯೂಚರ್ ಗ್ರೂಪ್ ಒಪ್ಪಂದಕ್ಕೆ ತಡೆ; ರಿಲಯನ್ಸ್ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಅಮೆಜಾನ್​ಗೆ ಜಯ

ನವದೆಹಲಿ: ದೇಶದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ರಿಲಯನ್ಸ್ ಪ್ರಾಬಲ್ಯಕ್ಕೆ ಏಟು ಕೊಡಬಲ್ಲ ದೊಡ್ಡ ಜಯವೊಂದನ್ನು ಅಮೆಜಾನ್ ಸಾಧಿಸಿದೆ. ರಿಲಯನ್ಸ್ ವಿರುದ್ಧದ ಕಾನೂನು ಹೋರಾಟದಲ್ಲಿ ಅಮೆಜಾನ್ ಪರವಾಗಿ ಸುಪ್ರಿಂ ಕೋರ್ಟ್​ ತೀರ್ಪು ಬಂದಿದೆ.

340 ಕೋಟಿ ಡಾಲರ್ ಮೌಲ್ಯದ ಸ್ವತ್ತುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್​ಗೆ ಮಾರಾಟ ಮಾಡಲು ಫ್ಯೂಚರ್ ಗ್ರೂಪ್ ಮಾಡಿಕೊಂಡಿದ್ದ ಒಪ್ಪಂದವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದ ಅಮೆಜಾನ್​ಗೆ ಜಯ ಸಿಕ್ಕಿದೆ.

ಫ್ಯೂಚರ್ ಗ್ರೂಪ್, ಅಮೆಜಾನ್​ನ ಪಾಲುದಾರ ಕಂಪನಿಯಾಗಿದ್ದು, ರಿಲಯನ್ಸ್​ಗೆ ಸ್ವತ್ತು ಮಾರಾಟ ಮಾಡಲು ಹೊರಟಿರುವುದು ಒಪ್ಪಂದದ ಉಲ್ಲಂಘನೆ ಎಂದು ಅಮೆಜಾನ್ ಆರೋಪ ಮಾಡಿತ್ತು.

ಅಮೆಜಾನ್ ಮಾಡಿರುವ ಆರೋಪಗಳಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ರಿಲಯನ್ಸ್ ಜೊತೆ ಫ್ಯೂಚರ್ ಗ್ರೂಪ್ ಮಾಡಿಕೊಂಡಿದ್ದ ಒಪ್ಪಂದಕ್ಕೆ ತಡೆಯೊಡ್ಡಿದೆ.

ಅಮೆಜಾನ್​ಗೆ ದೊರೆತ ಈ ಕಾನೂನು ಜಯ ದೇಶದ ಶಾಪಿಂಗ್ ವಲಯದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button