Breaking NewsLatestರಾಜಕೀಯರಾಜ್ಯ

ನಾಳೆಯೇ ಸಚಿವರು ಜಿಲ್ಲೆಗೆ ತೆರಳಿ ಕೊರೊನಾ, ನೆರೆ ಪರಿಶೀಲನೆ: ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಕೋವಿಡ್ ನೆರೆ ವೀಕ್ಷಣೆಗೆ ಸಚಿವರಿಗೆ ಜಿಲ್ಲೆ ಹಂಚಿಕೆ ಮಾಡಲಾಗುತ್ತದೆ. ನಾಳೆಯೇ ನೂತನ ಸಚಿವರು ಜಿಲ್ಲೆಗಳಿಗೆ ತೆರಳಿ ಕೋವಿಡ್ ನೆರೆ ಪರಿಶೀಲನೆ ನಡೆಸಲಿದ್ದಾರೆ. ಕೋವಿಡ್ ಟಾಸ್ಕ್ ಫೋರ್ಸ್ ಪುನರಚನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 10 ದಿನಗಳ ಕಾಲ ಸಚಿವ ಸಂಪುಟ ರಚನೆಗೆ ಓಡಾಡಿ ಅಂತಿಮ ಮಾಡಿದ್ದೇನೆ. ಆದರೆ ಖಾತೆ ಹಂಚಿಕೆ ವಿಳಂಬ ಮಾಡಲ್ಲ. ಇಂದಿನ ಸಂಪುಟ ಸಭೆಯಲ್ಲಿ ಯಾರೂ ಸಹ ಇಂತಹದ್ದೆ ಖಾತೆ ಬೇಕು ಎಂದು ಕೇಳಿಲ್ಲ ಎಂದರು.

ಎಸ್ ಟಿ ಕಲ್ಯಾಣಕ್ಕೆ ಪ್ರತ್ಯೇಕ ಖಾತೆ

ಪರಿಶಿಷ್ಟ ವರ್ಗ (ಎಸ್ ಟಿ) ಸಮುದಾಯಕ್ಕೆ ಪ್ರತ್ಯೇಕ ಖಾತೆ ತೆರೆಯಲಾಗುವುದು. ಎಸ್ ಟಿ ಸಮುದಾಯದ ಬೇರೆ ಬೇರೆ ಇಲಾಖೆಗಳ ಮೂಲಕ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಸ್ ಟಿ ಕಲ್ಯಾಣಾಭಿವೃದ್ದಿಗೆ ಪ್ರತ್ಯೇಕ ಸೆಕ್ರೇಟರಿಯಟ್ ಜಾರಿಗೆ ತರಲಾಗುವುದು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button