ಬಾಗಲಕೋಟೆ

ಬ್ಯಾಂಕ್ ಮ್ಯಾನೇಜರ್, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ತಿಜೋರಿ ದೋಚಿ ದುಷ್ಕರ್ಮಿಗಳು ಪರಾರಿ

ಬಾಗಲಕೋಟೆ: ಬ್ಯಾಂಕ್ ಮ್ಯಾನೇಜರ್ ಹಾಗೂ ಪತ್ನಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ,ಬೆಡ್ ತಿಜೋರಿ ದೋಚಿಕೊಂಡು ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮನೆಯೊಳಗೆ ನುಗ್ಗಿ,
ಮ್ಯಾನೇಜರ್ ದೇವಿದಾಸ ಚಿಕ್ಕರಮನೆ ಹಾಗೂ ಪತ್ನಿ ಸ್ವಾತಿ ಮೇಲೆ ಹಲ್ಲೆ ನಡೆಸಿದ್ದಾರೆ.ತಲೆ, ಮೈಗೆ ರಾಡ್ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪತಿ,ಪತ್ನಿ ಇಬ್ಬರಿಗೂ ತಲೆಗೆ ಗಂಭೀರ ಗಾಯವಾಗಿವೆ.ಹಲ್ಲೆಗೈದು ದುಷ್ಕರ್ಮಿಗಳು ಬೆಡ್ ತಿಜೋರಿ ದೋಚಿ ಪರಾರಿಯಾಗಿದ್ದಾರೆ.ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಗಾಯಾಳು ದಂಪತಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button