Breaking NewsLatestಇತರ ಕ್ರೀಡೆಕ್ರೀಡೆ
Neeraj Chopra: ಸೇನಾ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು

ಪುಣೆ : ಇಲ್ಲಿನ ಸೇನಾ ಕ್ರೀಡಾಂಗಣಕ್ಕೆ ಟೋಕಿಯೋ ಒಲಿಂಪಿಕ್ಸ್ ಜಾವಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಹೆಸರಿಟ್ಟು ಗೌರವ ನೀಡಲಾಗಿದೆ. ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಶುಕ್ರವಾರ ನವೀಕರಣಗೊಂಡ ಕ್ರೀಡಾಂಗಣವನ್ನು ನೀರಜ್ ಚೋಪ್ರಾ ಅವರ ಹೆಸರಿಟ್ಟು ಉದ್ಘಾಟಿಸಿದರು.
ಸೇನಾ ಕ್ರೀಡಾ ಸಂಸ್ಥೆಯ ಈ ಕ್ರೀಡಾಂಗಣದಲ್ಲಿ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಸೇನೆ ಸುಮಾರು 450 ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೇನೆಯ ವಿವಿಧ ವಿಭಾಗಗಳಿಂದ 19 ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿದ್ದಾರೆ. ನೀರಜ್ ಚೋಪ್ರಾ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
