
ಮುಂಬಯಿ: ಬಲಗೈ ಮತ್ತು ಎಡಗೈ ಸ್ಪಿನ್ ಮಾಂತ್ರಿಕ ವಿದರ್ಭ ತಂಡದ ಬೌಲರ್ ಅಕ್ಷಯ್ ಕರ್ನೆವಾರ್ ಟಿ20 ಕ್ರಿಕೆಟ್ ಬೌಲಿಂಗ್ ನಲ್ಲಿ 4 ಓವರ್ ಮೇಡನ್ ಮಾಡಿ 2 ವಿಕೆಟ್ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ.
ಮಣಿಪುರ ವಿರುದ್ಧದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 29 ವರ್ಷದ ಅಕ್ಷಯ್ ಎಸೆದ 4 ಓವರ್ ಗಳಲ್ಲಿ ಯಾವುದೇ ರನ್ ನೀಡಲಿಲ್ಲ, ಬದಲಾಗಿ 2 ವಿಕೆಟ್ ಗಳಿಸಿದರು. 4-4-0-2 ಇದು ಅವರ ಬೌಲಿಂಗ್ ಸ್ಪೆಲ್.
2018ರ ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ 4 ಓವರ್ ಗಳಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಗಳಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.
ಸೋಮವಾರ ವಿಶ್ವದಾಖಲೆ ಬರೆದ ಅಕ್ಷಯ್ ಮಂಗಳವಾರ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 4-1-5-4 ಇದು ಅವರ ಬೌಲಿಂಗ್ ಸ್ಪೆಲ್.




