ಆರೋಗ್ಯಆಹಾರಲೈಫ್ ಸ್ಟೈಲ್

ಇವುಗಳನ್ನು ಜೊತೆಯಾಗಿ ಸೇವಿಸದಿರಿ

ಪವಿತ್ರಾ ಶೆಟ್ಟಿ

ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಕೆಲವು ಕಾಂಬಿನೇಷನ್ ಗಳ ಬಗ್ಗೆ ತಿಳಿಯೋಣ ಬನ್ನಿ.

ನೀವು ಚವನ್ ಪ್ರಾಶ್ ಸೇವನೆ ಮಾಡುತ್ತೀರಾ, ಇದು ದೇಹಕ್ಕೆ ಚೈತನ್ಯ ಹಾಗೂ ಶಕ್ತಿಯನ್ನು ಮರುಕಳಿಸುತ್ತದೆ ಎಂಬುದೇನೋ ನಿಜ. ಆದರೆ ಇದನ್ನು ಸೇವಿಸುವ ವೇಳೆಯಲ್ಲಿ ಹಾಲು ಕುಡಿಯಬಾರದು. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಜೀರ್ಣಶಕ್ತಿ ಕುಂಠಿತಗೊಳ್ಳಬಹುದು, ಇಲ್ಲವೇ ತ್ವಚೆಯ ಅಲರ್ಜಿಗಳು ಕಾಣಿಸಿಕೊಳ್ಳಬಹುದು.

ಕೋಲ್ಡ್ ಕಾಫಿ ಕುಡಿಯುವ ವೇಳೆ ಎಂದಿಗೂ ಸ್ಯಾಂಡ್ ವಿಚ್ ತಿನ್ನದಿರಿ. ಇವುಗಳನ್ನು ಜೊತೆಯಾಗಿ ಸೇವಿಸಿದರೆ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಅಸ್ವಸ್ಥತೆ ಹೆಚ್ಚುವ ಸಂಭವವೇ ಹೆಚ್ಚು.

ಕಲ್ಲಂಗಡಿ ಹಣ್ಣಿನ ಜೊತೆ ಹಾಲು ಸೇವಿಸುವುದು ಕೂಡಾ ಒಳ್ಳೆಯದಲ್ಲ. ಕಲ್ಲಂಗಡಿ ಹಣ್ಣಿನಲ್ಲೇ ಸಾಕಷ್ಟು ಪ್ರಮಾಣದ ನೀರಿನಂಶ ಹೆಚ್ಚಿರುವುದರಿಂದ ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಲು ಮಾವಿನ ಹಣ್ಣಿನೊಂದಿಗೆ ಮಾತ್ರ ಹೆಚ್ಚು ಸೊಗಸಾಗಿ ಹೊಂದಿಕೊಳ್ಳುತ್ತದೆ.

ತಪ್ಪಾದ ಕಾಂಬಿನೇಷನ್ ಗಳು ರುಚಿಯನ್ನು ಹಾಳು ಮಾಡುವುದು ಮಾತ್ರವಲ್ಲ ಆರೋಗ್ಯವನ್ನು ಹಾಳು ಮಾಡಬಹುದು. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ.

Spread the love

Related Articles

Leave a Reply

Your email address will not be published. Required fields are marked *

Back to top button