Latestರಾಜಕೀಯರಾಜ್ಯ

ಎಚ್​ಡಿಕೆ ‘ಅಕ್ಕಿ’ಗೆ ಸಿದ್ದರಾಮಯ್ಯ ‘ತಣ್ಣೀರು’

ಬೆಂಗಳೂರು: ಸದನದಲ್ಲಿ ಅಕ್ಕಿ ವಿಚಾರ ಕೆದಕಿದ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿಗೆ ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

7 ಕೆಜಿ ಅಕ್ಕಿ ಕೊಡುವುದಕ್ಕೆ ಹಣ ಮೀಸಲಿಟ್ಟಿರಲಿಲ್ಲ. 5 ಕೆಜಿ ಒದಗಿಸುವುದಕ್ಕೆ ಮಾತ್ರವೇ ಹಣ ಇಡಲಾಗಿತ್ತು. ಅನ್ನಭಾಗ್ಯ ಅಕ್ಕಿಗೆ ಹಣ ಒದಗಿಸಲು ತಾನು ಕಷ್ಟಪಟ್ಟಿದ್ದೆ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿದ್ದರು.

ಅದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ, ನೀವೇನು ಕಷ್ಟಪಟ್ಟಿದ್ದು. ಸರ್ಕಾರ ನಿಮ್ಮದಾಗಿರಲಿಲ್ಲ. ಅದು ಸಮ್ಮಿಶ್ರ ಸರ್ಕಾರವಾಗಿತ್ತು. ನೀವು ಅದರಲ್ಲಿ ಸಿಎಂ ಆಗಿದ್ದಿರಿ ಅಷ್ಟೆ ಎಂದರು.

ಸಪ್ಲಿಮೆಂಟರಿ ಎಸ್ಟಿಮೇಟ್ ಎಂಬುದು ಇರುವುದು ಯಾಕೆ? ಅದರಿಂದ ಹಣ ಒದಗಿಸಬಹುದಿತ್ತಲ್ಲವೇ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button