ಮಹಿಳಾ ಸೇನಾಧಿಕಾರಿಗಳಿಗೆ ಮತ್ತೊಂದು ಜಯ; ಕೇಂದ್ರಕ್ಕೆ ನ್ಯಾಯಾಂಗ ನಿಂದನೆ ಎಚ್ಚರಿಕೆ ಕೊಟ್ಟ ಸುಪ್ರೀಂ ಕೋರ್ಟ್

ನವದೆಹಲಿ: ಮಹಿಳಾ ಸೇನಾ ಅಧಿಕಾರಿಗಳಿಗೆ ಮತ್ತೊಂದು ಜಯ ಸಿಕ್ಕಿದೆ. ನ್ಯಾಯಾಲಯದ ಮೆಟ್ಟಿಲೇರಿರುವ ಇನ್ನೂ 11 ಮಹಿಳಾ ಅಧಿಕಾರಿಗಳಿಗೆ 10 ದಿನಗಳೊಳಗೆ ಶಾಶ್ವತ ಆಯೋಗವನ್ನು ನೀಡುವುದಾಗಿ ಕೇಂದ್ರ ಹೇಳಿದೆ.
ಇನ್ನೂ ನ್ಯಾಯಾಲಯವನ್ನು ಸಂಪರ್ಕಿಸದ, ಆದರೆ ಅರ್ಹತೆಯ ಮಾನದಂಡಗಳನ್ನು ಪೂರೈಸಿರುವ ಎಲ್ಲಾ ಮಹಿಳಾ ಅಧಿಕಾರಿಗಳಿಗೆ 3 ವಾರಗಳಲ್ಲಿ ಶಾಶ್ವತ ಆಯೋಗವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪಿನಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಾಂಗ ನಿಂದನೆ ಆರೋಪದಲ್ಲಿ ಸೇನೆಯನ್ನು ತಪ್ಪಿತಸ್ಥ ಎಂದು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ ಬಳಿಕ ಕೇಂದ್ರವು ಮಣಿದಿದೆ.
ಅಕ್ಟೋಬರ್ 22ರಂದು, 39 ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.
ಸೇನೆಯನ್ನು ನ್ಯಾಯಾಂಗ ನಿಂದನೆ ಆರೋಪದಲ್ಲಿ ತಪ್ಪಿತಸ್ಥ ಎಂದು ಪರಿಗಣಿಸುತ್ತೇವೆ. ನಿಮ್ಮ ಮೇಲೆ ಕಣ್ಣಿಡುತ್ತೇವೆ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಎಚ್ಚರಿಸಿದ್ದರು. ಸೇನೆಯು ತನ್ನದೇ ಆದ ವ್ಯಾಪ್ತಿಯಲ್ಲಿ ಸರ್ವೋಚ್ಚವಾಗಿರಬಹುದು. ಆದರೆ ದೇಶದ ಸಾಂವಿಧಾನಿಕ ನ್ಯಾಯಾಲಯವು ತನ್ನದೇ ಆದ ಅಧಿಕಾರ ವ್ಯಾಪ್ತಿಯಲ್ಲಿ ಸರ್ವೋಚ್ಚವಾಗಿದೆ ಎಂದು ಅವರು ಹೇಳಿದ್ದರು.
ಶಾಶ್ವತ ಆಯೋಗವೆಂದರೆ ನಿವೃತ್ತಿಯಾಗುವವರೆಗೆ ಸೇನೆಯಲ್ಲಿ ವೃತ್ತಿಜೀವನ. ಆದರೆ ಅಪ್ಲಾವಧೀ ಆಯೋಗ 10 ವರ್ಷಗಳವರೆಗೆ ಇರುತ್ತದೆ. 10 ವರ್ಷಗಳ ಕೊನೆಯಲ್ಲಿ ಶಾಶ್ವತ ಆಯೋಗವನ್ನು ತೊರೆಯುವ ಅಥವಾ ಆರಿಸಿಕೊಳ್ಳುವ ಆಯ್ಕೆಯನ್ನು ಹೊಂದಿದೆ. ಒಬ್ಬ ಅಧಿಕಾರಿಯು ಶಾಶ್ವತ ಆಯೋಗವನ್ನು ಪಡೆಯದಿದ್ದರೆ, ಅಧಿಕಾರಿಯು ನಾಲ್ಕು ವರ್ಷಗಳ ವಿಸ್ತರಣೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ.
