IPL 2022Latestಕ್ರಿಕೆಟ್

ರಸೆಲ್ ಬ್ಯಾಟಿಂಗ್ ಅಬ್ಬರದಿಂದ ಕೆಕೆಆರ್ ಗೆ ಸಿಹಿ: ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲಿನ ಕಹಿ


ಮುಂಬೈ: ಶುಕ್ರವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ 138 ರನ್ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 51 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಆಂಡ್ರೆ ರಸೆಲ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಜೋಡಿ 5ನೇ ವಿಕೆಟ್ಗೆ 90 ರನ್ ಜೊತೆಯಾಟವಾಡುವ ಮೂಲಕ ಕೆಕೆಆರ್ಗೆ 6 ವಿಕೆಟ್ ಜಯ ತಂದುಕೊಟ್ಟಿತ್ತು.


ರಸೆಲ್ 31 ಎಸೆತದಲ್ಲಿ 8 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದರು. ಆರಂಭಿಕ ಆಘಾತ ಅನುಭವಿಸಿದರೂ ರಸೆಲ್ ಮಸಲ್ ಪವರ್ ಕೋಲ್ಕತಾ ತಂಡ 14.3 ಓವರ್ಗಳಲ್ಲಿ ಪಂದ್ಯ ಮುಗಿಸಿತು. ಈ ಮೂಲಕ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿದ ಕೆಕೆಆರ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.


ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್ 1, ಶಿಖರ್ ಧವನ್ 16 ರನ್ ಸಿಡಿಸಿ ಔಟಾದರು. ಭಾನುಕ ರಾಜಪಕ್ಸ ಬ್ಯಾಟಿಂಗ್ ಮೂಲಕ ಕೇವಲ 9 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 31 ರನ್ ಸಿಡಿಸಿದರು. ಲಿಯಾಮ್ ಲಿವಿಂಗ್ ಸ್ಟೋನ್ 19 ರನ್ ಗಳಿಸಿ ಔಟಾದರು.


ಶಾರುಖ್ ಖಾನ್ ಡಕೌಟ್ ಆದರೆ ಹರ್ಪ್ರೀತ್ ಬ್ರಾರ್ 14 ರನ್ ಕಾಣಿಕೆ ನೀಡಿದರು. ರಾಹುಲ್ ಚಹಾರ್ ಡಕೌಟ್ಗೆ ಬಲಿಯಾದರು. ಅಂತಿಮ ಹಂತದಲ್ಲಿ ಕಾಗಿಸೋ ರಬಾಡ ಅವರು 4 ಬೌಂಡರಿ 1 ಸಿಕ್ಸರ್ ಮೂಲಕ 16 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ಅರ್ಶದೀಪ್ ಸಿಂಗ್ ರನೌಟ್ಗೆ ಬಲಿಯಾದರೆ, ಒಡೆನ್ ಸ್ಮಿತ್ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 137 ರನ್ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು

Spread the love

Related Articles

Leave a Reply

Your email address will not be published. Required fields are marked *

Back to top button