Latestಕೊಡಗುಜಿಲ್ಲಾ ಸುದ್ದಿ
ಹಿಜಾಬ್ ಧರಿಸಿ ಕ್ಲಾಸ್‌ಗೆ ಬಂದ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ ಗರಂ

ಕೊಡಗು : ಹಿಜಾಬ್ ಹಾಕಿ ತರಗತಿಗೆ ಬಂದ ವಿದ್ಯಾರ್ಥಿನಿಯರ ವಿರುದ್ಧ ಪ್ರಾಂಶುಪಾಲರು ಸಿಟ್ಟಾದ ಘಟನೆ ಮಡಿಕೇರಿಯಲ್ಲಿ ಶುಕ್ರವಾರ ನಡೆದಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ ವಿದ್ಯಾರ್ಥಿನಿಗಳ ಗುಂಪೊಂದು ಹಿಜಾಬ್ ಧರಿಸಿಕೊಂಡೇ ತರಗತಿಗೆ ಬಂದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಇರುವುದರಿಂದ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಕೊಂಡು ಕ್ಲಾಸ್ ಗೆ ಬರಬಾರದು ಎಂದು ಮನವರಿಕೆ ಮಾಡಿದರು.
ಹೀಗಿದ್ದರೂ ವಿದ್ಯಾರ್ಥಿನಿಗಳು ಕೇಳದಿದ್ದಾಗ ಸಿಟ್ಟಾದ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಚೆನ್ನಾಗಿ ಬೈದು ಕಾಲೇಜಿನಿಂದ ಹೊರಗೆ ಕಳಿಸಿದರು.



