Latestಇತರ ಕ್ರೀಡೆಕ್ರೀಡೆ
ಸುಹಾಸ್ ಯತಿರಾಜ್ಗೆ ಜಯ

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.

SL4 ವಿಭಾಗದಲ್ಲಿ ಸ್ಪರ್ಧಿಸಿದ ಸುಹಾಸ್ ಜರ್ಮನಿಯ ನಿಕಲಾಸ್ ಪಾಟ್ ವಿರುದ್ಧ 21-9, 21-3 ಅಂತರದಲ್ಲಿ ಜಯ ಗಳಿಸಿ ಎರಡನೇ ಸುತ್ತು ತಲುಪಿದರು.
ಸರ್ಬಿಯಾದ ದನಿಜೆಲಾ ಜೊವಾನೊ ವಿರುದ್ಧದ ಟೆಕ್ವಾಂಡೋ ಪಂದ್ಯದಲ್ಲಿ ಅರುಣಾ ತನ್ವರ್ ಜಯಗಳಿಸಿ ಕ್ವಾರ್ಟರ್ ಫೈನಲ್ ತಲುಪಿದರು.
200 ಮೀ. ಕೆನೊಯ್ ಸ್ಪ್ರಿಂಟ್ ವಿಭಾಗದ ಹೀಟ್ ನಲ್ಲಿ 4ನೇ ಸ್ಥಾನ ಗಳಿಸಿದ ಪ್ರಾಚಿ ಯಾದವ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಥಾಯ್ಲೆಂಡ್ ನ ಸಿರಿಪಾಂಗ್ ಟಿಮಾರೊಮ್ ವಿರುದ್ಧದ SL4 ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ತರುಣ್ ದಿಲ್ಲಾನ್ 21-7, 21-13 ಅಂತರದಲ್ಲಿ ಜಯ ಗಳಿಸಿ ಎರಡನೇ ಸುತ್ತು ತಲುಪಿದ್ದಾರೆ.



