Breaking NewsLatestರಾಷ್ಟ್ರೀಯ
ಶ್ರೀಜೇಶ್ಗೆ 2 ಕೋಟಿ ರೂ. ಬಹುಮಾನ ಪ್ರಕಟಿಸಿದ ಕೇರಳ

ಕೊಚ್ಚಿ: ಭಾರತ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಲ್ ಕೀಪರ್ ಕೇರಳದ ಪಿ.ಆರ್ ಶ್ರೀಜೇಶ್ ಅವರಿಗೆ ಅಲ್ಲಿಯ ಸರಕಾರ 2ಕೋಟಿ ರೂ. ನಗದು ಬಹುಮಾನ ಘೋಷಿಸಿರುವುದಲ್ಲದೆ ವೃತ್ತಿಯಲ್ಲಿ ಭಡ್ತಿ ನೀಡಿದೆ.
ಶ್ರೀಜೇಶ್ ಇನ್ನು ಮುಂದೆ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕ (ಸ್ಪೋರ್ಟ್ಸ್)ರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀಜೇಶ್ ಗೆ ಅನಿವಾಸಿ ಉದ್ಯಮಿಯೋರ್ವರು ಈಗಾಗಲೇ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಭಾಗವಹಿಸಿದ ಕೇರಳದ ಇತರ ಎಲ್ಲ ಕ್ರೀಡಾಪಟುಗಳಿಗೆ ಅಲ್ಲಿಯ ಸರಕಾರ ತಲಾ 5ಲಕ್ಷ ರೂ. ಬಹುಮಾನ ಪ್ರಕಟಿಸಿದೆ.
