Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿ

ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದ ಅಶೋಕ್​ ರಾವ್ ಇನ್ನಿಲ್ಲ

ಸ್ಯಾಂಡಲ್​ವುಡ್ ಸಿನಿಮಾ ರಂಗ ಕಳೆದ ಎರಡು ವರ್ಷದಿಂದ ಸಾಕಷ್ಟು ಬಡವಾಗಿದೆ. ಚಿತ್ರರಂಗ ಹಲವು ಕಲಾವಿದರನ್ನ ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ. ವರ್ಷದ ಆರಂಭದಲ್ಲಿಯೇ ನಿರ್ದೇಶಕ ಪ್ರದೀಪ್ ರಾಜ್​ರನ್ನ ಕಳೆದುಕೊಂಡಿದ್ದ ಕನ್ನಡ ಸಿನಿ ಇಂಡಸ್ಟ್ರಿ ಮೊನ್ನೆ ಮೊನ್ನೆ ತಾನೇ ಕಟ್ಟೆ ರಾಮಚಂದ್ರರನ್ನ ಕಳೆದುಕೊಂಡಿತ್ತು. ಇದೀಗ ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದ ಅಶೋಕ್​ರಾವ್ ಕೊನೆಯುಸಿರೆಳೆದಿದ್ದಾರೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಶೋಕ್​ ರಾವ್ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ತಮ್ಮ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅಶೋಕ್ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ವಿದ್ಯಾರಣ್ಯಪುರದ ಅವರ ನಿವಾಸದಲ್ಲಿ ಅಶೋಕ್ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button