Latestಇತರ ಕ್ರೀಡೆಕ್ರೀಡೆ

Rupinderpal Singh: ಹಾಕಿಗೆ ನಿವೃತ್ತಿ ಹೇಳಿದ ರೂಪಿಂದರ್ ಪಾಲ್ ಸಿಂಗ್

ಹೊಸದಿಲ್ಲಿ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತ ಹಾಕಿ ತಂಡದ ಆಟಗಾರ ರೂಪಿಂದರ್ ಪಾಲ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ.

ಯುವ ಆಟಗಾರರಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಡ್ರ್ಯಾಗ್ ಫ್ಲಿಕರ್ ರೂಪಿಂದರ್ ಪಾಲ್ ಭಾರತದ ಪರ 223 ಅಂತರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಆಡಿರುತ್ತಾರೆ.‌

“ಭಾರತದ ಹಾಕಿಯಿಂದ ನಿವೃತ್ತಿ ಹೊಂದಲು ಬಯಸಿರುವೆ. ಕಳೆದ ಎರಡು ತಿಂಗಳುಗಳಲ್ಲಿ ನಾನು ನನ್ನ ತಂಡದೊಂದಿಗೆ ಅಪೂರ್ವ ಕ್ಷಣಗಳನ್ನು ಕಳೆದಿರುವೆ. ಟೋಕಿಯೋ ದಲ್ಲಿ ತಂಡದ ಇತರ ಆಟಗಾರರೊಂದಿಗೆ ಪೊಡಿಯಂನಲ್ಲಿ ನಿಂತಿದ್ದು ಬದುಕಿನುದ್ದಕ್ಕೂ ನೆನಪಿರುವ ಕ್ಷಣ. ಕಳೆದ 13 ವರ್ಷಗಳಿಂದ ಭಾರತಕ್ಕಾಗಿ ಆಡಿರುವೆ, ಮುಂದಿನ ಅವಕಾಶಗಳು ಯುವಕರಿಗೆ ಸಿಗಲಿ” ಎಂದು 30ರ ಹರೆಯದ ಸಿಂಗ್ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button