Latestಜಿಲ್ಲಾ ಸುದ್ದಿಶಿವಮೊಗ್ಗ
ಹಿಜಾಬ್ ವಿವಾದ: ಕೇಸರಿ ಬಾವುಟ ಹಾರಿಸಿದ್ದ ಕಾಲೇಜಿನಲ್ಲೇ ಹಾರಿದ ರಾಷ್ಟ್ರಧ್ವಜ

ಶಿವಮೊಗ್ಗ: ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚರಣೆಗೂ ಅವಕಾಶವಿದೆ. ಎಲ್ಲರೂ ಸಮಾನತೆಯ ಹಕ್ಕಗಳನ್ನು ಹೊಂದಿದ್ದಾರೆ. ಆದರೆ ರಾಜಕೀಯ ಹಿತಾದೃಷ್ಟಿಯಿಂದ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ರಾಜ್ಯದಲ್ಲಿ ಹಿಜಾಬ್ ಕಿಚ್ಚು ಮತ್ತಷ್ಟು ಭುಗಿಲೆದ್ದಿದೆ.
ನಿನ್ನೆ ಶಿವಮೊಗ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇಂದು ಎನ್ ಎಸ್ ಯುಐ ರಾಷ್ಟ್ರಧ್ವಜ ಹಾರಿಸಿದೆ.
ದೇಶದಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು ಮುಖ್ಯವಲ್ಲ. ನಮಗೆ ತ್ರಿವರ್ಣ ಧ್ವಜವೇ ಶ್ರೇಷ್ಠವಾಗಿದೆ. ಹಾಗಾಗಿ ರಾಷ್ಟ್ರಧ್ವಜ ಹಾರಿಸುವ ಮೂಲಕ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ಕೈ ಬಿಡಬೇಕು. ವಿದ್ಯಾರ್ಥಿಗಳು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಎನ್ ಎಸ್ ಯುಐ ಕಾರ್ಯಕರ್ತರು ಮನವಿ ಮಾಡಿಕೊಂಡರು.



