Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ವೀಕೆಂಡ್ ಕರ್ಫ್ಯೂಗೆ ಸ್ತಬ್ಧಗೊಂಡ ಧಾರವಾಡ ನಗರ : ಜನರಿಲ್ಲದೆ ವ್ಯಾಪಾರಸ್ಥರ ಪರದಾಟ

ಧಾರವಾಡ : ಕೊರೊನಾ ಮೂರನೇ ಅಲೆಯ ಭೀತಿ ಹಾಗೂ ಒಮಿಕ್ರಾನ್ ವೈರಸ್ ಹರಡುವಿಕೆ ತಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ತಜ್ಞರ ಸಲಹೆ ಮೇರೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ರಾಜ್ಯ ಸರ್ಕಾರದ ವಾರಾಂತ್ಯದ ಕರ್ಫ್ಯೂಗೆ ಧಾರವಾಡ ನಗರ ಸ್ತಬ್ಧಗೊಂಡಿದೆ. ಈಗಾಗಲೇ ಪ್ರಮುಖ ರಸ್ತೆ ಹಾಗೂ ವೃತಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಅನಾವಶ್ಯಕವಾಗಿ ಓಡಾಟ ನಡೆಸುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ‌ ಕಣ್ಣು ಇಟ್ಟಿದೆ.

ನಗರದ ಹೃದಯಭಾಗ ಎಂದೇ ಕರೆಯಿಸಿಕೊಳ್ಳುವ ಜುಬ್ಲಿ ವೃತ, ಹುಬ್ಬಳ್ಳಿ ಧಾರವಾಡ ರಸ್ತೆ, ಹಳಿಯಾಳ ರಸ್ತೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸೇರಿದಂತೆ ಜನರ ಓಡಾಟವು ಸ್ಥಬ್ಧಗೊಂಡಿದೆ. ಜುಬ್ಲಿ ವೃತದಲ್ಲಿ ಮೆಡಿಕಲ್ ಶಾಪ್‌ಗಳನ್ನು ಹೊರತು ಪಡಿಸಿ ಉಳಿದಂತಹ‌ ಎಲ್ಲ ಅಂಗಡಿ ಮಾಲೀಕರು ತಮ್ಮ ತಮ್ಮ ಶಾಪ್‌ಗಳನ್ನು ಬಂದ್ ಮಾಡಿ ಬೀಗ ಹಾಕಿದ್ದಾರೆ.

ಗ್ರಾಹಕರಿಲ್ಲದೆ ಹೈರಾಣಾದ ವ್ಯಾಪಾರಸ್ಥರು.

ರಾಜ್ಯ ಸರ್ಕಾರ ಬೀದಿ ವ್ಯಾಪಾರಸ್ಥರಿಗೆ ಹಾಗೂ ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಗಳಿ ವೀಕೆಂಡ್ ಕರ್ಫ್ಯೂನಲ್ಲಿ ವಿನಾಯಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡ ಸುಭಾಷ್ ರಸ್ತೆ, ನೆಹರು ಮಾರುಕಟ್ಟೆ, ಕೆರೆ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಗಾರರು ತಮ್ಮ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಗ್ರಾಹಕರಿಲ್ಲದೆ ಈಗ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕುರುವ ಪರಿಸ್ಥಿತಿ ನಗರದ ವ್ಯಾಪಾರಸ್ಥರಿಗೆ ಒದಗಿ ಬಂದಿದೆ.

ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಶಾಫ್‌ಗಳು ಬಂದ್

ನಗರದ ಮಾರುಕಟ್ಟೆ ಪ್ರಮುಖ ರಸ್ತೆಗಳಾದ ಸುಭಾಷ್ ರೋಡ್, ಟಿಕಾರೆ ರೋಡ್, ರೀಗಲ್ ವೃತ, ಶಿವಾಜಿ ವೃತ ಸೇರಿದಂತೆ ಬಹುತೇಕ ಕಡೆಗಳಲ್ಲಿ, ಬಟ್ಟೆ ಅಂಗಡಿ, ಮೊಬೈಲ್ ಶಾಫ್, ಎಲೆಕ್ಟ್ರಾನಿಕ್ ಶಾಫ್ ಹಾಗೂ ವಾಹನಗಳ ಸಾಮಗ್ರಿ ಮಾರಾಟ ಅಂಗಡಿಗಳಿದ್ದು, ಅವೆಲ್ಲವು ಈಗ ವೀಕೆಂಡ್ ಕರ್ಫ್ಯೂಗೆ ಸಂಪೂರ್ಣ ಸ್ತಬ್ಧಗೊಂಡಿವೆ. ಈಗಾಗಲೇ ಈ ಎಲ್ಲ ಅಂಗಡಿಗಳಿಗೂ ವ್ಯಾಪಾರ ವಹಿವಾಟು ನಡೆಸಲು ನಡೆಸಲು ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿನ‌ ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಗಳ ಹೊರತು ಪಡೆಸಿ ಉಳಿದಂತಹ ಬಹುತೇಕ ಶಾಫ್ ಮಾಲೀಕರು ತಮ್ಮ ಅಂಗಡಿಗಳಿಗೆ ಬೀಗ‌ ಹಾಕಿ, ಸರ್ಕಾರದ ವೀಕೆಂಡ್ ಕರ್ಪ್ಯೂಗೆ ಒಲ್ಲದ ಮನಸ್ಸಿನಿಂದ ಬೆಂಬಲ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಹೊಸ ವರ್ಷದ ಆರಂಭದ ತಿಂಗಳಲ್ಲಿ‌ ಕೊರೊನಾ ಮೂರನೇ‌ ಅಲೆಯ ಭೀತಿಯ ಜೊತೆಗೆ ಒಮಿಕ್ರಾನ್ ವೈರಸ್ ತಡೆಯಲು ಈಗ ರಾಜ್ಯ ಸರ್ಕಾರ ವಾರಾಂತ್ಯದ ಕರ್ಪ್ಯೂಗೆ ಜಾರಿ ಮಾಡಿದ್ದು, ಈ ವೀಕೆಂಡ್ ಕರ್ಫ್ಯೂಗೆ ಧಾರವಾಡಿಗರು ಒಲ್ಲದ ಮನಸ್ಸಿನಿಂದ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.‌

Spread the love

Related Articles

Leave a Reply

Your email address will not be published. Required fields are marked *

Back to top button