Latestಮನರಂಜನೆಸಿನಿಮಾಸೆಲೆಬ್ರಿಟಿ

ಕ್ರಾಂತಿ ಚಿತ್ರಕ್ಕೆ ದರ್ಶನ್ ಪಡೆದುಕೊಂಡ ಸಂಭಾವನೆ ಎಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್​ವುಡ್​ನ ನಂಬರ್ ಒನ್ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ನಟ ಅನ್ನೋ ಖ್ಯಾತಿಗೂ ಡಿ ಬಾಸ್ ಪಾತ್ರವಾಗಿದ್ದಾರೆ. ದಚ್ಚು ಸಿನಿಮಾಗಳು ಕಲೆಕ್ಷನ್​ನಲ್ಲೂ ನಂಬರ್ ವನ್. ಇದೀಗ ದರ್ಶನ್ ಸಂಭಾವನೆಯಲ್ಲೂ ನಂಬರ್ ವನ್ ಆಗಿದ್ದಾರೆ.

ಸಾಮಾನ್ಯವಾಗಿ ಸ್ಯಾಂಡಲ್​ವುಡ್ ಸಿನಿಮಾ ರಂಗದಲ್ಲಿ ಕಲಾವಿದರು ತಮ್ಮ ಸಂಭಾವನೆ ಬಗ್ಗೆ ತುಟಿ ಎರಡು ಮಾಡೋದಿಲ್ಲ. ಹಾಗೆಯೇ ಚಿತ್ರತಂಡ ಕೂಡ ಎಷ್ಟು ಸಂಭಾವನೆ ನೀಡಿದ್ದೇವೆ ಅನ್ನೋದನ್ನ ಹೇಳೋದಿಲ್ಲ. ಆದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಬಗ್ಗೆ ಗಾಂಧಿನಗರದಲ್ಲಿ ಗುಸು ಗುಸು ಕೇಳಿ ಬರ್ತಿದೆ.

ವಿ.ಹರಿಕೃಷ್ಣ ನಿರ್ದೇಶನದ, ಶೈಲಜಾ ನಾಗ್ ನಿರ್ಮಾಣದ ಕ್ರಾಂತಿ ಸಿನಿಮಾ 2022ರ ಸಾಲಿನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರೋ ಚಿತ್ರ. ಬಾಕ್ಸ್ ಆಫೀಸ್​ನಲ್ಲಿ ಸದಾ ಸುಲ್ತಾನನಾಗಿ ಮೆರೆಯುತ್ತಿರುವ ದರ್ಶನ್​ಗೆ ಈ ಸಿನಿಮಾ ಖ್ಯಾತಿ ತಂದುಕೊಡಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದೇ ವೇಳೆ ಈ ಚಿತ್ರಕ್ಕೆ ದರ್ಶನ್ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗತ್ತಿದೆ.

ಪ್ಯಾನ್ ಇಂಡಿಯಾ ಸಿನಿಮಾವಾಗಿರೋ ಕ್ರಾಂತಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರ್ತಿದೆ. ಮೂಲಗಳ ಪ್ರಕಾರ ದರ್ಶನ್ ಈ ಸಿನಿಮಾಗೆ 12 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಆದ್ರೆ ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ದರ್ಶನ್ ಆಗಲಿ ತುಟಿ ಎರಡು ಮಾಡಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button