Latestಮನರಂಜನೆಸಿನಿಮಾಸೆಲೆಬ್ರಿಟಿ

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕ್ಷಮೆ ಯಾಚಿಸಿದ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಕ್ಷಮೆ ಕೇಳೋಕೆ ಕಾರಣವಾಗಿರೋದ ಎರಡು ದಿನಗಳ ಹಿಂದೆ ಇದ್ದ ಅವರ 45ನೇ ವರ್ಷದ ಹುಟ್ಟುಹಬ್ಬ.

ದರ್ಶನ್ ಇತ್ತೀಚೆಗೆ ತಮ್ಮ 45ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ದರ್ಶನ್ ರನ್ನ ಮೀಟ್ ಮಾಡಿ ವಿಶ್ ಮಾಡ್ಬೇಕು ಎಂದು ಕಾಯ್ತಿದ್ದ ಅಭಿಮಾನಿಗಳಿಗೆ ಈ ವರ್ಷವೂ ಆ ಭಾಗ್ಯ ಸಿಕ್ಕಿಲ್ಲ. ಯಾಕಂದ್ರೆ ಕೋವಿಡ್ ಹಾಗೂ ಪುನೀತ್ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಭಾರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದರು. ಜೊತೆಗೆ ಅಭಿಮಾನಿಗಳು ಇರುವ ಸ್ಥಳದಿಂದಲೇ ಶುಭ ಹಾರೈಸುವಂತೆ ಕೇಳಿಕೊಂಡಿದ್ರು.

ದರ್ಶನ್ ಗೆ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ರು. ಆದರೆ ಕೆಲವೊಂದಷ್ಟು ಮಂದಿ ದರ್ಶನ್ ಮನೆ ಮುಂದೆ ಬಂದು ಘೋಷಣೆಗಳನ್ನ ಕೂಗಿದ್ದರು. ಆದ್ರೆ ದರ್ಶನ್ ಅಂದು ಮನೆಯಲ್ಲಿ ಇಲ್ಲವಾದ ಕಾರಣ ಅಭಿಮಾನಿಗಳನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ದರ್ಶನ್ ತಮ್ಮ ಅಭಿಮಾನಿಗಳನ್ನ ಭೇಟಿಯಾಗದೆ ಅವರಿಗೆ ನಿರಾಸೆ ಮಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ.

ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ವರ್ಷ ನಿಮ್ಮನ್ನು ಈ ಸಮಯದಲ್ಲಿ ಭೇಟಿಯಾಗದ ಕಾರಣ ನನ್ನ ಕ್ಷಮೆ ಇರಲಿ. ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದೇನೆ. ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮೆಲ್ಲರನ್ನು ಕಾಣುತ್ತೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಸದಾ ಚಿರಋಣಿ ಎಂದಿದ್ದಾರೆ. ಅಂದ್ಹಾಗೆ ದರ್ಶನ್ ಅಭಿಮಾನಿಗಳನ್ನ ಪ್ರೀತಿಯಿಂದ ಸೆಲೆಬ್ರಿಟಿಗಳು ಎಂದು ಕರೆದಿದ್ದಾರೆ.

ದರ್ಶನ್ ಪ್ರತಿವರ್ಷವು ತಮ್ಮ ಹುಟ್ಟುಹಬ್ಬದ ದಿನವನ್ನ ಅಭಿಮಾನಿಗಳಿಗಾಗಿ ಮೀಸಲಿಡುತ್ತಾರೆ. ಅಂದು ಸಿನಿಮಾಗಳ ಕೆಲಸಗಳಿಗೆ ಬ್ರೇಕ್ ಹಾಕಿ ಸಂಪೂರ್ಣ ದಿನವನ್ನು ಅಭಿಮಾನಿಗಳ ಜೊತೆ ಕಳೆಯುತ್ತಾರೆ. ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಕೋವಿಡ್ ಕಾರಣದಿಂದ ಹಿಂದಿನ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಹೀಗಾಗಿ ಈ ಬಾರಿ ಅದ್ದೂರಿಯಾದ ಡಿಬಾಸ್ ಬರ್ತಡೇ ಸೆಲೆಬ್ರೇಟ್ ಮಾಡ್ಬೇಕು ಅಂತಿದ್ದ ಅಭಿಮಾನಿಗಳೀಗೆ ಕೊಂಚ ಮಟ್ಟಿಗೆ ನಿರಾಸೆಯಾಗಿತ್ತು. ಇದೀಗ ದರ್ಶನ್ ಮಾತು ಕೇಳಿ ಮುಂದಿನ ವರ್ಷ ದರ್ಶನ್ ಜೊತೆ ಹುಟ್ಟುಹಬ್ಬ ಆಚರಿಸಿಸೋಕೆ ಡಿಬಾಸ್ ಫ್ಯಾನ್ಸ್ ನಿರ್ಧರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button