Latestಕಲಬುರ್ಗಿಜಿಲ್ಲಾ ಸುದ್ದಿ

ಕಲಬುರ್ಗಿಯಲ್ಲಿ ಮುಂದುವರೆದ ಕಿಡಿಗೇಡಿಗಳ ದುಷ್ಕೃತ್ಯ: ಬೈಕ್ ಗಳಿಗೆ ಬೆಂಕಿ ಇಟ್ಟು ಪರಾರಿ

ಕಲಬುರಗಿ : ನಗರದಲ್ಲಿ ಇತ್ತೀಚೆಗೆ ಕಿಡಿಗೇಡಿಗಳ ಅಟ್ಟಹಾಸ ಮೀತಿ ಮೀರುತ್ತಿದೆ. ಎಣ್ಣೆ ಏಟಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿವುಂಟು ಮಾಡುತ್ತಿರುವ ಘಟನೆ ಪದೇಪದೇ ವರದಿಯಾಗುತ್ತಿದೆ.

ಕಳೆದ ವಾರವಷ್ಟೇ ನಗರದ ಸ್ವಾಮಿ ವಿವೇಕಾನಂದ ಬಡಾವಣೆಗೆ ಬೈಕ್‌ನಲ್ಲಿ ಲಗ್ಗೆಯಿಟ್ಟ ದುಷ್ಕರ್ಮಿಗಳು ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಮನೆ ಗಾಜುಗಳಿಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದರು. ಕಿಡಿಗೇಡಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿತ್ತು. ಇದೀಗ ಮತ್ತೆ ನಗರದ ಅಂಬೇಡ್ಕರ್ ಆಶ್ರಯ ಕಾಲೋನಿಯಲ್ಲಿ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಮೂರು ಬೈಕ್​ಗಳಿಗೆ ಬೆಂಕಿ ಹಚ್ಚಿ ಖದೀಮರು ಪರಾರಿಯಾಗಿದ್ದಾರೆ.

ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಜನ ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರು ಪುಂಡ ಪೋಕರಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button