Breaking NewsLatestಕಲಬುರ್ಗಿರಾಜ್ಯ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ; ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ವಿರುದ್ಧ ದೂರು

ಕಲಬುರಗಿ; ಕಲಬುರಗಿ ‌ಮಹಾನಗರ ಪಾಲಿಕೆ ಆಯುಕ್ತ ಐಎಎಸ್ ಅಧಿಕಾರಿ ಸ್ನೇಹಲ್‌ ಲೋಖಂಡೆ ವಿರುದ್ಧ ಲವ್ ಸೆಕ್ಸ್ ದೋಖಾ ಗಂಭೀರ ಆರೋಪ ಕೇಳಿಬಂದಿದೆ.

2017ರ ಬ್ಯಾಚ್ ಐಎಎಸ್ ಅಧಿಕಾರಿ ಆಗಿರುವ ಸ್ನೇಹಲ್‌ ಲೋಖಂಡೆ ಸದ್ಯ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಾರೆ. ತಮ್ಮ ಟ್ರೇನಿಂಗ್ ವೇಳೆ 2019ರಲ್ಲಿ ದೆಹಲಿ‌ ಮೂಲದ ಯುವತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಸಲುಗೆ ಬೆಳಸಿಕೊಂಡಿದ್ದರು. ಮದುವೆಯಾಗುವದಾಗಿ ನಂಬಿಸಿ ಲಾಡ್ಜ್ ಹಾಗೂ ರೂಂ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆಂದು ಯುವತಿ ಆರೋಪಿಸಿದ್ದಾಳೆ. ನಂತರ ಐಪಿಲ್ ಟ್ಯಾಬ್ಲೆಟ್ ನುಂಗಲು ಲೋಖಂಡೆ ಹೇಳಿದರಂತೆ.

ಯುವತಿ ತನ್ನ ಪೊಷಕರಿಗೆ ಈ ವಿಷಯ ತಿಳಿಸಿದ್ದಾಗ ಆಕೆಯ ಪೊಷಕರು ಸ್ನೇಹಲ್ ಲೋಖಂಡೆ ಅವರ ಕುಟುಂಬಸ್ಥರ ಗಮನಕ್ಕೆ ತಂದಿದ್ದಾರೆ. ಮಾತನಾಡಿ ಎಲ್ಲವು ಸರಿಪಡಿಸುವದಾಗಿ ಭರವಸೆ ನೀಡಿದ ಸ್ನೇಹಲ್ ತಂದೆಯವರು, ಇದುವರೆಗೆ ಏನು ಕ್ರಮ ಕೈಗೊಂಡಿಲ್ಲ ಎಂದು ಅಳಲು ತೊಡಿಕೊಂಡ ಯುವತಿ, ಸ್ನೇಹಲ್ ಲೋಖಂಡೆಯಿಂದ ನನ್ನ ಜೀವನ ಹಾಳಾಗಿದೆ ನ್ಯಾಯ ಒದಗಿಸಿ ಅಂತ ಮನವಿ ಮಾಡಿದ್ದಾಳೆ.

ಅಶ್ಲಿಲ್ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ಯುವತಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾಳೆ. ಈ ಬಗ್ಗೆ ಟ್ವೀಟರ್ ನಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವೆ ಸ್ಮ್ತುತಿ ಇರಾನಿ, ಸಿಎಂ ಬಸವರಾಜ ಬೊಮ್ಮಾಯಿ, ಕಲಬುರಗಿ ಉಸ್ತುವಾರಿ ಮುರುಗೇಶ ನಿರಾಣಿಗೆ ಟ್ವೀಟರ್ ಮೂಲಕ ದೂರು ನೀಡಿದ್ದಾಳೆ. ಕರ್ನಾಟಕ ಮುಖ್ಯ ಕಾರ್ಯದರ್ಶಿಗೂ ಯುವತಿ ದೂರು ನೀಡಿದ್ದು, ದೂರು ನೀಡಿ ಒಂದು ವಾರ ಕಳೆದ್ದರೂ ಕ್ರಮ ಕೈಗೊಂಡಿಲ್ಲ, ಆದ್ರೆ ಸ್ನೇಹಲ್ ಲೋಖಂಡೆ ಆರೋಪವನ್ಮು ತಳ್ಳಿಹಾಕಿದ್ದಾರೆ. ಯುವತಿ ಪರಿಚಯವಷ್ಟೆ ಆದ್ರೆ ಆರೋಪಗಳು ಸುಳ್ಳು, ಯುವತಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button