Latestಕಲಬುರ್ಗಿಜಿಲ್ಲಾ ಸುದ್ದಿ
ಹೈಕೋರ್ಟ್ ಆದೇಶ ಮೀರಿ ಹಿಜಾಬ್ ಧರಿಸಿ ಕ್ಲಾಸ್ ಗೆ ಅಟೆಂಡ್

ಕಲಬುರಗಿ: ಹೈ ಕೋರ್ಟ್ ಮಧ್ಯಂತರ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿಯೇ ಶಾಲೆಗೆ ವಿದ್ಯಾರ್ಥಿನಿಯರು ಆಗಮಿಸಿದ ಘಟನೆ ನಗರದ ಉರ್ದು ಶಾಲೆಯಲ್ಲಿ ನಡೆದಿದೆ.
ಹಳೆ ಜೇವರ್ಗಿ ರಸ್ತೆಯಲ್ಲಿರೋ ಉರ್ದು ಪ್ರೌಢ ಶಾಲೆಯಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿ, ಹಿಜಾಬ್ ಧರಿಸಿಯೇ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದರು. ಮಾಧ್ಯಮದವರು ಆಗಮಿಸುತ್ತಿದ್ದಂತೆ ಎಚ್ಚೆತ್ತ ಶಿಕ್ಷಕರು ತಕ್ಷಣ ಕ್ಲಾಸ್ ರೂಮ್ ಗೆ ಆಗಮಿಸಿ ಹಿಜಾಬ್ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರ ಸೂಚನೆ ಮೇರೆಗೆ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಎಕ್ಸಾಂ ಬರೆಯುತ್ತಿದ್ದಾರೆ.
ವಿದ್ಯಾರ್ಥಿನಿಯರು ಹಳ್ಳಿಗಳಿಂದ ಬಂದಿದ್ದು ಅವರಿಗೆ ಹೈಕೋರ್ಟ್ ಆದೇಶದ ಬಗ್ಗೆ ಗೊತ್ತಿರದ ಕಾರಣ ಕ್ಲಾಸ್ ರೂಮ್ ನಲ್ಲಿ ಹಿಜಾಬ್ ಧರಿಸಿ ಕುಳಿತಿದ್ದಾರೆ. ಶಿಕ್ಷಕರ ಗಮನಕ್ಕೆ ಬರುತ್ತಿದಂತೆ ಹಿಜಾಬ್ ತೆಗೆಸಲಾಗಿದೆ. ಹೈಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ ಅಂತ ಶಾಲೆಯ ಶಿಕ್ಷಕ ಶಿವಾನಂದ ತಿಳಿಸಿದ್ದಾರೆ.



