ಮನರಂಜನೆಸಿನಿಮಾಸೆಲೆಬ್ರಿಟಿ

ದುಬಾರಿ ಬೆಲೆಗೆ ‘ಜೀ’ ಪಾಲಾದ ಗಾಳಿಪಟ 2

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗ್​​ರಾಜ್ ಭಟ್ ಕಾಂಬಿನೇಷನ್​ನ ಗಾಳಿಪಟ-2 ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ರಿಲೀಸ್​ಗೂ ಮೊದಲು ಗಾಳಿಪಟ 2 ಚಿತ್ರಕ್ಕೆ ಸಖತ್ ಡಿಮ್ಯಾಂಡ್ ಬಂದಿದೆ. ಗಾಳಿಪಟ 2 ಚಿತ್ರ ಬಿಡುಗಡೆಗೂ ಮೊದಲೇ ನಿರ್ಮಾಪಕರ ತಿಜೋರಿ ಭರ್ತಿಮಾಡಿದ್ದು ಚಿತ್ರದ ಸ್ಯಾಟ್​ಲೈಟ್ ಹಾಗೂ ಒಟಿಟಿ ರೈಟ್ಸ್ ಭರ್ಜರಿ ಬೆಲೆಗೆ ಸೇಲ್ ಆಗಿದೆ.

ಗಣೇಶ್ ಹಾಗೂ ಭಟ್ರು ಕಾಂಬಿನೇಷನ್​ನಲ್ಲಿ ರೆಡಿಯಾಗಿರೋ ಗಾಳಿಪಟ 2 ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸದ್ಯ ಚಿತ್ರದ ಶೂಟಿಂಗ್ ಕೆಲಸ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಇನ್ನೆನ್ನೂ ಸಿನಿಮಾ ರಿಲೀಸ್ ಆಗಲಿದ್ದು ಅದಕ್ಕೂ ಮೊದಲೇ ಚಿತ್ರತಂಡ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ.

ಗಾಳಿಪಟ 2 ಚಿತ್ರದ ಸ್ಯಾಟ್​ಲೈಟ್ ಹಾಗೂ ಒಟಿಟಿ ರೈಟ್ಸ್ ಜೀ ಪಾಲಾಗಿದ್ದು ಬರೋಬ್ಬರಿ 8 ಕೋಟಿಗೆ ಖರೀದಿ ಮಾಡಿದೆಯಂತೆ. ಇನ್ನೂ ಗಣೇಶ್ ಸಿನಿ ಕೆರಿಯರ್​ನಲ್ಲೇ ಅತಿ ಹೆಚ್ಚು ಬೆಲೆಗೆ ಸೇಲಾದ ಸಿನಿಮಾ ಅನ್ನೋ ಖ್ಯಾತಿಯನ್ನ ಗಾಳಿಪಟ 2 ಚಿತ್ರ ಘಳಿಸಿದೆ.

ಸದ್ಯ ಕೊರೊನಾ ಕಾರಣದಿಂದ ಸಾಕಷ್ಟು ಸಿನಿಮಾಗಳು ರಿಲೀಸ್ ಡೇಟ್ ಮುಂದೂಡಿವೆ. ಹೀಗಾಗಿ ಈಗಾಗ್ಲೆ ಕಂಪ್ಲೀಟ್ ಆಗಿರೋ ಚಿತ್ರಗಳು ಬಿಡುಗಡೆಯಾದ ಬಳಿಕ ಕೊಂಚ ಸಮಯ ತೆಗೆದುಕೊಂಡು ಗಾಳಿಪಟ 2 ಚಿತ್ರವನ್ನ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಗಣೇಶ್​ ಜೊತೆ ದಿಗಂತ್ ಹಾಗೂ ಲೂಸಿಯಾ ಪವನ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button