
ಪುನೀತ್ ರಾಜ್ ಕುಮಾರ್ ಅವರು ಅಗಲಿ ಮೂರು ತಿಂಗಳು ಕಳೆಯುತ್ತಿದೆ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಆದರೆ ಪುನೀತ್ ನೆನಪಿಗಾಗಿ ಅಭಿಮಾನಿಗಳು ಕೆಲ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಅಮೇಜಾನ್ ಪ್ರೈಮ್ ವಿಡಿಯೋ ಬಂಪರ್ ಆಫರ್ ನೀಡಿದೆ.
ಪುನೀತ್ ನಿರ್ಮಾಣದ ಹಾಗೂ ಅವರು ನಟಿಸಿದ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡಿದೆ. ಇದ್ದರಿಂದ ಅಭಿಮಾನಿಗಳಿಗೆ ಸಖತ್ ಸಂತಸವಾಗಿದೆ.
ಹೌದು ಫೆಬ್ರವರಿ 1 ರಿಂದ ಫೆಬ್ರವರಿ 28 ರವರೆಗೆ ಉಚಿತವಾಗಿ ಸಿನಿಮಾ ವೀಕ್ಷಣೆ ಮಾಡಬಹುದು. ಪುನೀತ್ ರಾಜ್ ಕುಮಾರ್ ನಿರ್ಮಾಣದ ಕವಲುದಾರಿ’, ‘ಮಾಯಾ ಭಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.
ಅವರ ನಿರ್ಮಾಣದ ಎಲ್ಲಾ ಚಿತ್ರಗಳು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿಯೇ ವೀಕ್ಷಣೆಗೆ ಲಭ್ಯವಿದೆ. ಅವರ ನಿರ್ಮಾಣದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳು ಪ್ರೈಮ್ನಲ್ಲಿ ಬಿಡುಗಡೆ ಆಗುತ್ತಿದೆ.




