ಉಡುಪಿ
ದೇವಾಲಯಗಳ ಆರಂಭಕ್ಕೆ ಚಿಂತನೆ; ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ

ಉಡುಪಿ: ಕೊರೋನಾ ನಿಯಮಾವಳಿಗಳನ್ನು ಪಾಲಿಸುತ್ತಾ ದೇವಾಲಯ ಪ್ರವೇಶ ಮತ್ತು ಯಕ್ಷಗಾನ ಆರಂಭದ ಬಗ್ಗೆ ಚಿಂತಿಸಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಒಂದೇ ಸಲ ನೂರಾರು ಜನರಿಗೆ ದರ್ಶನಕ್ಕೆ ಅವಕಾಶ ನೀಡಿದರೆ ಸಮಸ್ಯೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಜನದಟ್ಟಣೆಗೆ ಕಡಿವಾಣ ಹಾಕಬೇಕಿರುವುದು ಅನಿವಾರ್ಯ ಎಂದರು.
ಇದು ಆರೋಗ್ಯ ಇಲಾಖೆಯ ತಜ್ಞರು ನೀಡಿರುವ ಅಭಿಪ್ರಾಯ. ಜುಲೈ 5ರ ಬಳಿಕ ಲಾಕ್ಡೌನ್ ಮತ್ತಷ್ಟು ಸಡಿಲಿಕೆ ಆಗಲಿದೆ ಎಂದು ಅವರು ಹೆಳಿದರು.




