ರಾಮನಗರ

ಚನ್ನಪಟ್ಟಣದಲ್ಲಿ ಮತ್ತೆ ಆನೆಗಳ ದಾಳಿ

ರಾಮನಗರ: ಚನ್ನಪಟ್ಟಣದಲ್ಲಿ ಮುಂದುವರೆಯುತ್ತಲೆ ಇದೆ ಕಾಡಾನೆಗಳ ಹಾವಳಿ. ಕಾಡಿನಿಂದ ನಾಡಿಗೆ ಬಂದು ರೈತರ ಬೆಳೆಯನ್ನ ನಾಶ ಪಡಿಸುತ್ತಲೆ ಇದೆ ಎಂದು ಅರಣ್ಯಾಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದಾರು ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರು ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನಾಶ ಪಡಿಸುತ್ತಿದೆ‌. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ದಾಳಿ ನಡೆದಿದ್ದು, ರೈತರು ಬೆಳೆದಿದ್ದ ಹೀರೆಕಾಯಿ, ಪಪ್ಪಾಯ, ಅವರೇಕಾಳು, ಜೋಳ, ರಾಗಿ ಬೆಳೆಗಳು ನಾಶ ಪಡಿಸಿದೆ.

ನಿರಂತರವಾಗಿ ಕಬ್ಬಾಳು ಅರಣ್ಯ ಪ್ರದೇಶದಿಂದ ಕಾಡಾನೆಗಳು ದಾಳಿ ಮಾಡುತ್ತಲೆ ಇಂದು ತಡರಾತ್ರಿ ಕೂಡ ಐದು ಕಾಡಾನೆಗಳು ಜಮೀನಿಗೆ ನುಗ್ಗಿ ರೈತನ ಬೆಳೆಯನ್ನ ಸಂಪೂರ್ಣ ನಾಶಗೊಳಿಸಿದೆ.

ಪದೇ ಪದೇ ಆನೆಗಳು ದಾಳಿ ನಡೆಸುತ್ತಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆನೆಗಳ ದಾಳಿಯಿಂದ ಶಾಶ್ವತ ಪರಿಹಾರ ನೀಡಬೇಕೆಂದು ರೈತರರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button