ಚಿಕ್ಕಮಗಳೂರುಜಿಲ್ಲಾ ಸುದ್ದಿ
ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಶಾಸಕ ಟಿ ಡಿ ರಾಜೇಗೌಡ ಭೇಟಿ

ಚಿಕ್ಕಮಗಳೂರು: ಭಾರೀ ಮಳೆಯಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಅವಘಡಗಳಾಗಿದ್ದ ಸ್ಥಳಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಇಂದು ಭೇಟಿ ನೀಡಿದ್ದಾರೆ.
ಈ ವರ್ಷವಷ್ಟೇ ದುರಸ್ತಿಪಡಿಸಿದ್ದ ಬಾಳೆಹೊನ್ನೂರಿನ ಹಲಸೂರು ರಸ್ತೆಯಲ್ಲಿ ಆಗಿರುವ ದುರವಸ್ಥೆಯನ್ನು ಪರಿಶೀಲಿಸಿದರು. ಮಳೆ ನೀರು ನುಗ್ಗಿ ದೊಡ್ಡಮುಂಗುಡದ ಮೋರಿ 50 ಅಡಿಗಳಷ್ಟು ಕುಸಿದಿದೆ. ಇಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಾವಣ ಗ್ರಾಮದ ಮುಡೋಡಿಯಲ್ಲಿ ಜಾನಕಿ ಪುಟ್ಟಯ್ಯ ಎಂಬವರ ಸಂಪೂರ್ಣ ಹಾನಿಯಾಗಿದ್ದ ಮನೆಗೆ ಶಾಸಕ ರಾಜೇಗೌಡ ಭೇಟಿ ನೀಡಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.




