ಮಂಡ್ಯ

ಬೋನಿಗೆ ಬಿದ್ದ ಚಿರತೆಗಳು; ಗ್ರಾಮಸ್ಥರಲ್ಲಿ ಸಂತಸ

ಮಂಡ್ಯ : ಮದ್ದೂರು ತಾಲೂಕಿನ ಛತ್ರಲಿಂಗನದೊಡ್ಡಿ, ಸಿದ್ದೇಗೌಡನದೊಡ್ಡಿ ಗ್ರಾಮಗಳಲ್ಲಿ ಎರಡು ಚಿರತೆಗಳು ಬೋನಿಗೆ ಬಿದ್ದಿವೆ.

ಈ ಗ್ರಾಮಗಳಲ್ಲಿ ಚಿರತೆ ಉಪಟಳ ಮಿತಿ ಮೀರಿತ್ತು. ಕಳೆದ 15 ದಿನಗಳಿಂದ ರೈತರು ಹಾಗೂ ಕರು, ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದವು. ಹೀಗಾಗಿ, ಗದ್ದೆ ಹೊಲಗಳಿಗೆ ಹೋಗಲು ರೈತರು ಆತಂಕದಿಂದಲೇ ಹೋಗುತ್ತಿದ್ದರು. ಸೆರೆಗಾಗಿ ಇರಿಸಿದ್ದ ಬೋನಿಗೆ ಎರಡು ಚಿರತೆಗಳು ಸಿಕ್ಕಿರುವುದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಮಗಳಲ್ಲಿ ಚಿರತೆಗಳ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಜನರು ಮನವಿ ಮಾಡಿದ್ದರು. ಪರಿಣಾಮವಾಗಿ ಚಿರತೆಗಳ ಸೆರೆಗೆ ಎರಡು ಕಡೆಗಳಲ್ಲಿ ಬೋನುಗಳನ್ನು ಇರಿಸಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button