ಜಿಲ್ಲಾ ಸುದ್ದಿಮೈಸೂರು
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಾಪಸ್ ಚುನಾವಣೆ ಗಿಮಿಕ್: ಬಡಗಲಪುರ ನಾಗೇಂದ್ರ

ಮೈಸೂರು : ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆದ ಹಿನ್ನೆಲೆ ಸರ್ಕಾರ ಕೊನೆಗೂ ಮೊಂಡಾಟವನ್ನು ಬಿಟ್ಟಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಇದು ಜನಾಂದೋಲನಕ್ಕೆ ಸಂದ ಜಯವಾಗಿದ್ದು, ಕೃಷಿ ಮಸೂದೆ ವಾಪಸ್ ಪಡೆದ ಹಿನ್ನೆಲೆ ಚುನಾವಣೆಯ ಗಿಮಿಕ್ ಆಗಿದೆ ಎಂದರು. ಕೃಷಿ ಮಸೂದೆ ವಾಪಸ್ ಪಡೆದ ಹಿನ್ನೆಲೆ ನಮಗೆ ಅನುಮಾನ ಇದೆ ಎಂದು ಕಾಯ್ದೆ ವಾಪಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಹಲವು ರಾಜ್ಯಗಳಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಹೀಗಾಗಿ ಕೃಷಿ ಕಾಯಿದೆಯನ್ನ ವಾಪಸ್ ಪಡೆದುಕೊಂಡಿದೆ. ಕೃಷಿ ಕಾಯ್ದೆ ವಿರೋಧಿಸಿ ಭಾಷೆ, ಗಡಿ, ಜಾತಿ, ಧರ್ಮ ಮೀರಿ ಎಲ್ಲರೂ ಒಂದಾಗಿದ್ದರು. ಸಂಘಟಿತ ಹೋರಾಟದ ಫಲವಾಗಿ ಕಾಯ್ದೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.




