ಧಾರವಾಡದ ಸೂಪರ್ ಮಾರ್ಕೆಟ್‌ಗೆ ಸಂತೋಷ್ ಭೇಟಿ; ಬೀದಿ ವ್ಯಾಪಾರಸ್ಥರ ಸಮಸ್ಯೆ ಆಲಿಸಿದ ಮಾಜಿ ಸಚಿವ

ಧಾರವಾಡ : ಕಳೆದ ವಾರದ ಹಿಂದೆ ಹುಬ್ಬಳ್ಳಿ- ಧಾರವಾಡ ಮಾಹಾನಗರ ಪಾಲಿಕೆಯ ಅಧಿಕಾರಿಗಳು, ಧಾರವಾಡ ಸೂಪರ್ ಮಾರುಕಟ್ಟೆಯಲ್ಲಿನ ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾಗಿದ್ದ ಮಾರಕಟ್ಟೆ ಪ್ರದೇಶಕ್ಕೆ, ಮಾಜಿ ಸಚಿವ ಸಂತೋಷ ಲಾಡ್ ಅವರು ಭೇಟಿ ನೀಡಿದರು.
ಮಾರುಕಟ್ಟೆಯ ಪ್ರದೇಶವಾದ ಸುಭಾಷ್ ರೋಡ್, ನೆಹರು ಮಾರಕಟ್ಟೆ ಪ್ರದೇಶ ಸೇರಿದಂತೆ ಸೂಪರ್ ಮಾರುಕಟ್ಟೆಯ ಪ್ರದೇಶಕ್ಕೂ ತೆರಳಿ ವ್ಯಾಪಾರಸ್ಥರ ಸಮಸ್ಯೆಯನ್ನು ಆಲಿಸಿದರು. ಇನ್ನೂ ವೇಳೆ ಸ್ಥಳಿಯ ಕಾಂಗ್ರೆಸ್ ಮುಖಂಡರಾದ ಇಸ್ಮಾಯಲ್ ತಮಾಟಗಾರ ಹಾಜರಿದ್ದು, ಅನಧಿಕೃತ ಅಂಗಡಿ ತೆರವಿನ ಕುರಿತು ಸಂತೋಷ ಲಾಡ್ ಅವರಿಗೆ ಮಾಹಿತಿ ನೀಡುದರು.
ಈಗಾಗಲೇ ಬೀದಿ ಬದಿಯ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಸಿ ನಂತರ ಅಂಗಡಿಗಳ ತೆರವಿಗೆ ಈಗಾಗಲೇ ಪಾಲಿಕೆ ಅಧಿಕಾರಿಗಳಿ ಕಳೆದವಾರ ಒತ್ತಾಯ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಹಾಗೂ ಸ್ಥಳಿಯ ಅಂಗಡಿ ಮಾಲೀಕರ ವಿರೋಧದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ ಎಂದು ಇಸ್ಮಾಯಿಲ್ ತಮಾಟಗಾರವರು ಸ್ಥಳಿಯ ಸಮಸ್ಯೆ ಕುರಿತು ವಿವರಣೆ ನೀಡಿದರು.
ಇನ್ನೂ ಮಾರುಕಟ್ಟೆಯ ಪ್ರದೇಶವನ್ನು ಒಂದು ಬಾರಿ ಸಂಚರಿಸಿ ನೋಡಿದ ಮಾಜಿ ಸಂತೋಷ ಲಾಡ್ ಅವರು ಬೀದಿ ಬದಿಯ ವ್ಯಾಪಾರಸ್ಥರ ಸಮಸ್ಯಯನ್ನು ಆಲಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು ಹು-ಧಾ ಮಾಹಾನಗರ ಪಾಲಿಕೆಯ ಅಧಿಕಾರಿಗಳು ಅವೈಜ್ಞಾನಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.




