ದಾವಣಗೆರೆ

ಹೆಂಡಕ್ಕೆ ಹಣ ಕೊಡಲಿಲ್ಲವೆಂದು ಹೆಂಡತಿಯನ್ನೇ ಕೊಂದ

ದಾವಣಗೆರೆ: ನಿತ್ಯವೂ ಮದ್ಯಪಾನ ಮಾಡಿ ಬರುತ್ತಿದ್ದ ಪತಿಗೆ ಕುಡಿಯಬೇಡ ಎಂದಿದ್ದಕ್ಕೆ ಪತ್ನಿಯನ್ನು ಕೊಂದ ಘಟನೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.

40 ವರ್ಷದ ಶಿಲ್ಪ ಕೊಲೆಯಾದ ಮಹಿಳೆ. ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ ಹೆಸರು ಗಿರೀಶ್. ಕಳೆದ ಎರಡು ವರ್ಷಗಳಿಂದಲೂ ಸೊರಟೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಪ್ರತಿನಿತ್ಯ ಕುಡಿದು ಬರುತ್ತಿದ್ದ ಗಂಡನಿಗೆ ಶಿಲ್ಪಾ ಬುದ್ದಿಮಾತು ಹೇಳುತ್ತಿದ್ದರು‌.‌ ಮಾತ್ರವಲ್ಲ, ಕುಡಿಯಲು ಹಣ ಕೊಡುತ್ತಿಲ್ಲ, ಬುದ್ದಿಮಾತು ಹೇಳುತ್ತೀಯಾ ಎಂದು ಕುಪಿತಗೊಂಡು ಗಿರೀಶ್ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಕೊಲೆಯಾದ 8 ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಸಿಪಿಐ ದೇವರಾಜ್ ನೇತೃತ್ವದ ತಂಡ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button