ಹುಬ್ಬಳ್ಳಿಯಲ್ಲಿ ಶ್ರೀಗಂಧ ಮರಕ್ಕೆ ಕನ್ನಾ: ಮಾಲೀಕನ ಮನೆ ಸೇರಿ ಪಕ್ಕದ ಮನೆಗಳಿಗೂ ಲಾಕ್ ಹಾಕಿ ಕಳ್ಳತನ

ಧಾರವಾಡ : ಎಲ್ಲರೂ ನಿದ್ರೆಗೆ ಜಾರಿದ ಸಮಯ ನೋಡಿಕೊಂಡ ಕಳ್ಳರು ಶ್ರೀಗಂಧ ಮನೆ ಮಾಲೀಕನ ಮನೆ ಸೇರಿದಂತೆ ಪಕ್ಕದ ಮನೆಗಳನ್ನು ಲಾಕ್ ಮಾಡಿ, ಶ್ರೀಗಂಧ ಮರ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಭವಾನಿ ನಗರದ ದೋಬಿ ಘಾಟ್ ನಲ್ಲಿ ನಡೆದಿದೆ.
ಆನಂದ ಪಾಟೀಲ್ ಎಂಬುವರ ಸೇರಿದ್ದ ಶ್ರೀಗಂಧದ ಮರವನ್ನು ಕಳ್ಳರು ಕದ್ದುಕೊಂಡು ಪರಾರಿಯಾಗಿದ್ದಾರೆ. ಇನ್ನೂ ಮರ ಕೊರೆಯುವ ಸಮಯದಲ್ಲಿ ಯಾರು ಎದ್ದು ಬರಬಾರದು ಎಂಬ ಹಿನ್ನೆಲೆಯಲ್ಲಿ ಆನಂದ ಪಾಟೀಲ ಅವರ ಮನೆ ಹಾಗೂ ಅಕ್ಕಪಕ್ಕದ ಮನೆಗಳನ್ನು ಲಾಕ್ ಮಾಡಿ ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಎಂಟು ಜನರ ಕಳ್ಳರ ತಂಡ ಈ ಕೃತ್ಯ ಮಾಡಿರಬಹುದು ಎಂದು ಹೇಳಲಾಗುತ್ತಿದ್ದು, ಕಳ್ಳತನ ಮಾಡಿದ ನಂತರ ಅಕ್ಕ ಪಕ್ಕದ ಮನೆಗಳ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿಯ ಈ ಘಟನೆಯಿಂದ ನಗರದ ಜನ ಬೆಚ್ಚಿ ಬಿದಿದ್ದಾರೆ.
ಆನಂದ ಪಾಟೀಲ್ ಅವರು ತಮ್ಮ ಮನೆಯ ಹಿಂಬಾಗಿನಿಂದ ಆಗಮಿಸಿ ಓರ್ವ ಕಳ್ಳನನ್ನು ಹಿಡಿಯಲು ಯತ್ನಿಸಿದ್ದರಂತೆ. ಈ ವೇಳೆ ಕಳ್ಳ ಆನಂದವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಆನಂದರವರು ಆಶೋಕ ನಗರ ಪೊಲೀಸ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.




