ಚಿಕ್ಕಮಗಳೂರು

ಕಾವೇರಿ ಕೂಗು ತಂಡದಿಂದ ರೈತರಿಗಾಗಿ ಆ್ಯಪ್ ಬಿಡುಗಡೆ

ಚಿಕ್ಕಮಗಳೂರು: ಕಾವೇರಿ ಕೂಗು ತಂಡದಿಂದ ರೈತರಿಗಾಗಿ ಸ್ಟೇಟ್ ಆಫ್ ದಿ ಆರ್ಟ್ ಮೊಬೈಲ್ ಆಪ್ ಬಿಡುಗಡೆ ಮಾಡಲಾಯಿತು. ಈಶಾ ಔಟ್ರೀಚ್, ಕಾವೇರಿ ಕೂಗು ಆ್ಯಪ್​ಗೆ ಮಂಡಳಿ ಅಧ್ಯಕ್ಷ ಎಂ ಎಸ್ ಬೋಜೇಗೌಡ ಚಾಲನೆ ನೀಡಿದರು.

ಕರ್ನಾಟಕದಲ್ಲಿ ಮರಗಳ ಆಧಾರಿತ ಕೃಷಿಯ ದೊಡ್ಡ ಪ್ರಮಾಣದ ಅನುಷ್ಠಾನಕ್ಕೆ ಈ ಆಪ್ ಸಹಕಾರಿಯಾಗಲಿದೆ. ಇದು ಅಸ್ತಿತ್ವದಲ್ಲಿರುವ ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳಲಿದೆ ಹಾಗೂ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮರಗಳನ್ನು ನೆಡಲು ಪ್ರೋತ್ಸಾಹ ನೀಡಲಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಕಾವೇರಿ ಕೂಗಿನ 890 ಮರ ಮಿತ್ರರು ರಾಜ್ಯದ ಕಾವೇರಿ ಕೊಳ್ಳ ಪ್ರದೇಶದ 9 ಜಿಲ್ಲೆಗಳ 5.2 ದಶಲಕ್ಷ ರೈತರು 242 ಕೋಟಿ ಮರಗಳನ್ನು ನೆಡಲು ಮತ್ತು ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಮರಗಳ ವಲಯದ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಲಾಗಿದೆ.

ಸೇವಾತಂಡದ ನೇತೃತ್ವದಲ್ಲಿ ಈ ಕಾರ್ಯವು 6-8 ವಾರಗಳಲ್ಲಿ 24 ಲಕ್ಷ ರೈತರಿಗೆ ಕರ್ನಾಟಕದ ಕಾವೇರಿ ಕೊಳ್ಳದ 57 ತಾಲೂಕುಗಳಲ್ಲಿ 1785 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದೆ. ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ವನ್ಯಜೀವಿ ಗೌರವ ವಾರ್ಡನ್ ಜಿ ವೀರೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಟಿ ಆರ್ ವೇದಮೂರ್ತಿ, ವೈಶಾಲಿ ದೀಪಕ್, ಕಾವೇರಿ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button