ಚಿಕ್ಕಮಗಳೂರುಜಿಲ್ಲಾ ಸುದ್ದಿ
ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವ

ಚಿಕ್ಕಮಗಳೂರು: ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬೆಟ್ಟವನ್ನು ಏರಿ ದೇವಿಯ ದರ್ಶನ ಪಡೆದರು.
ದೇವಿರಮ್ಮ ಉತ್ಸವ ಮೂರ್ತಿಗೆ, ಪ್ರತೀ ವರ್ಷದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಟ್ಟದಲ್ಲಿ ಮಂಜು ಕವಿದ ವಾತಾವರಣ ಆವರಿಸಿದ್ದರಿಂದ ಸುತ್ತಲ ಹಸಿರು ಸೌಂದರ್ಯ ಸವಿಯಲು ಸಾಧ್ಯವಾಗಲಿಲ್ಲ. ಭಕ್ತರು ಗುಂಪು ಗುಂಪಾಗಿ ಬೆಟ್ಟಕ್ಕೆ ತೆರಳಿದರು. ಮಳೆ ಸುರಿಯತ್ತಿದ್ದರಿಂದ ಜಾರವ ಭಯದಿಂದ ಕೆಲವರು ಹಗ್ಗ ಹಿಡಿದು ಹರಸಾಹಸ ಮಾಡಿ ಬೆಟ್ಟ ಹತ್ತಿದರು. ಸ್ಥಳೀಯರಿಗೆ ಮಾತ್ರ ಅವಕಾಶ ಎಂದು ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ ಸಹ ದೂರದ ಊರಿನ ಸಾಕಷ್ಟು ಭಕ್ತಾದಿಗಳು ಆಗಮಿಸಿದ್ದರು
ಶಾಸಕ ಸಿ ಟಿ ರವಿ ಬೆಟ್ಟವೇರಿ ದೇವಿ ದರ್ಶನ ಪಡೆದರು. ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ಸಿಬ್ಬಂದಿ ಜತೆ ತೆರಳಿದ್ದು, ಜಿಲ್ಲಾಡಳಿತ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.




