ಬಾಗಲಕೋಟೆ

ಈಜು ಕಲಿಯಲು ಹೋಗಿ ಇಬ್ಬರು ಬಾಲಕರು ನದಿ ಪಾಲು

ಬಾಗಲಕೋಟೆ: ಈಜು ಕಲಿಯಲು ನದಿಗೆ ಹೋಗಿದ್ದ ಇಬ್ಬರು ಬಾಲಕರು ಮಲಪ್ರಭಾ ನದಿ ಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೊಟ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ಗುಳೇದಗುಡ್ಡ ತಾಲೂಕಿನ ಕೊಟ್ನಳ್ಳಿ ಗ್ರಾಮದ ಮಲ್ಲಪ್ಪ ಬೈಲಪ್ಪ ಅಂಬಿಗೇರಿ(12) ಹಾಗೂ ಮನೋಜ್ ಮಲ್ಲಪ್ಪ ಉಪ್ಪಾರ(10) ಇಬ್ಬರು ಬಾಲಕರು ಮಲಪ್ರಭಾ ನದಿಗೆ ಮಧ್ಯಾಹ್ನ 12ಗಂಟೆಗೆ ಈಜು ಕಲಿಯಲು ಹೋಗಿದ್ದಾರೆ.ಈ ವೇಳೆ ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದು, ಸ್ಥಳೀಯರೊಂದಿಗೆ ಪೋಲಿಸರು ಇಬ್ಬರು ಬಾಲಕರ ಶವವನ್ನು ಹೊರಗೆ ತೆಗೆದಿದ್ದಾರೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಇಬ್ಬರು ಬಾಲಕರು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.ಈ ಘಟನೆ ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button