Breaking Newsಕ್ರಿಕೆಟ್ಕ್ರೀಡೆಸುದ್ದಿ

Cricket in Olympics: ಒಲಿಂಪಿಕ್ಸ್ ಗೆ ಬರಲಿದೆ ಕ್ರಿಕೆಟ್..?

ಲಂಡನ್ : ಕ್ರಿಕೆಟ್ ಆಟವನ್ನು ಒಲಿಂಪಿಕ್ಸ್ ಗೆ ಸೇರಿಸಬೇಕೆಂಬ ಶತಮಾನದ ನಿರೀಕ್ಷೆ 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಲು ಕಾರ್ಯಪಡೆಯೊಂದನ್ನು ನಿರ್ಮಿಸಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2028ರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಪದಕ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ.

1900ರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಪಂದ್ಯವಿದ್ದಿತ್ತು. ಗ್ರೆಟ್ ಬ್ರಿಟನ್ ಮತ್ತು ಫ್ರಾನ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಆದರೆ ಆ ನಂತರ ನಡೆದಿರಲಿಲ್ಲ.

“ಜಗತ್ತಿನಾದ್ಯಂತ 100ಕೋಟಿಗೂ ಅಧಿಕ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಅವರಲ್ಲಿ ಶೇ.90ರಷ್ಡು ಜನ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಇರಬೇಕು ಅನ್ನುತ್ತಿದ್ದಾರೆ. ಆದ್ದರಿಂದ ಕ್ರಿಕೆಟ್ ಗೆ ಒಲಿಂಪಿಕ್ಸ್ ನಲ್ಲಿ ಅವಕಾಶ ಕಲ್ಪಿಸುವುದು ಇದು ಸಕಾಲ,” ಎಂದು ಐಸಿಸಿ ಅಧ್ಯಕಗಷ ಗ್ರೆಗ್ ಬಾರ್ಕ್ಲೆ ಹೇಳಿದ್ದಾರೆ

ಐಸಿಸಿ ಒಲಿಂಪಿಕ್ ಕಾರ್ಯಪಡೆಯ ಮುಂದಾಳತ್ವವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಇಯಾನ್ ವ್ಯಾಟ್ಮೋರ್ ವಹಿಸಲಿದ್ದಾರೆ. ಐಸಿಸಿಯ ಸ್ವತಂತ್ರ ನಿರ್ದೇಶಕರಾದ ಇಂದ್ರ ನೂಯಿ, ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ತವೆಂಗ್ವಾ ಮುಖುಹ್ಲಾನಿ, ಐಸಿಸಿ ಅಸೋಸಿಯೇಟ್ ಸದಸ್ಯ ನಿರ್ದೇಶಕ ಮತ್ತು ಏಷ್ಯಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಹೆಂದ್ರಾ ವಲ್ಲಿಪುರಂ ಮತ್ತು ಯುಎಸ್ಎ ಕ್ರಿಕೆಟ್ ಎಂದಿದ್ದಾರೆ.

ಪರಾಗ್ ಮರಾಠೆ ಸಮಿತಿಯಲ್ಲಿದ್ದು, ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸುವುದು ಸೂಕ್ತ ಎಂದಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button