Breaking NewsLatestಬಾಗಲಕೋಟೆರಾಜ್ಯ

ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗುವುದಾದರೆ ಐದು ಪೀಠವಾಗಲಿ: ವಚನಾನಂದ ಸ್ವಾಮೀಜಿ

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ ಒಳಿತು ಆಗುವುದಾದರೆ ಐದು ಪೀಠ ಮಾಡಬಹುದು ಎಂದು ಬಾಗಲಕೋಟೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.

ಬಾಗಲಕೋಟೆಯಲ್ಲಿ ಖಾಸಗಿ ಹೊಟೇಲ್ ನಲ್ಲಿ ನಡೆದ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸಭೆ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಮ್ಮ ಹರಿಹರ ಪೀಠದ ಮೂಲ ಸ್ವಾಮೀಜಿಗಳು ಹಾಗೂ ಪೀಠದಿಂದ ಈ ಹಿಂದೆ ನಿರ್ಣಯ ಮಾಡಲಾಗಿತ್ತು ಎಂದರು.ಈ ಸಭೆಯಲ್ಲಿ ನಾನು ಹರ ಜಾತ್ರೆಗೆ ಆಹ್ವಾನ ನೀಡಲು ಬಂದಿದ್ದೆ. ಒಕ್ಕೂಟದ ಎಲ್ಲ ಸ್ವಾಮೀಜಿಗಳು ಮುಕ್ತ ಮನಸ್ಸಿನಿಂದ ಬರುವುದಾಗಿ ಹೇಳಿದ್ದಾರೆ.ಪಂಚಮಸಾಲಿ ಮಠಾಧೀಶರ ಒಕ್ಕೂಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.ಎಲ್ಲ ರೀತಿಯಿಂದ ಸಹಕಾರ ಇದೆ ಎಂದರು.

ಎಲ್ಲ ಸ್ವಾಮೀಜಿಗಳು ನಮ್ಮ ಸಮುದಾಯದವರೆ.ಹಲವು ಬಾರಿ ಮನಗೂಳಿ ಸ್ವಾಮೀಜಿ ನಮ್ಮ ಪೀಠಕ್ಕೆ ಬಂದು ಚರ್ಚಿಸಿದ್ದಾರೆ. ನಾವು ಇನ್ನು ಮೇಲೆ ಒಕ್ಕೂಟದ ಸದಸ್ಯ ಎಂದು ಹೇಳಬಹುದು.ಹರಿಹರ ಪೀಠದ ಸಂಪೂರ್ಣ ಬೆಂಬಲ ಒಕ್ಕೂಟಕ್ಕೆ ಇದೆ.ಸಮಾಜದ ಅಭಿವೃದ್ಧಿಗಾಗಿ ಹಂಚಿಕೊಂಡು ಕೆಲಸ ಮಾಡಿದರೆ ಎಲ್ಲವೂ ಒಳಿತಾಗಲಿದೆ ಎಂಬುದು ನಮ್ಮ ಅನಿಸಿಕೆ‌‌.ತಾತ್ವಿಕವಾಗಿ ಮೂರನೇ ಪೀಠಕ್ಕೆ ವಚನಾನಂದ ಸ್ವಾಮೀಜಿಗಳು ಒಪ್ಪಿಗೆ ನೀಡಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಅವರನ್ನು ಕರೆದುಕೊಂಡು ಸಾಗ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಈಗ ಕೇವಲ ನಮ್ಮದನ್ನು ಮಾತ್ರ ಹೇಳಬಹುದು.ಅವರ ಬಗ್ಗೆ ನಾನು ಹೇಳೋದಿಲ್ಲ.ಹರಿಹರದಲ್ಲಿ ನಡೆಯುವ ಹರ ಜಾತ್ರೆಯಲ್ಲಿ ಸಮುದಾಯದ ಜನರಿಗೆ ಒಂದು ಉತ್ತಮ ಸಂದೇಶ ಕೊಡುತ್ತೇವೆ ಎಂದರು.ಒಕ್ಕೂಟದ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ಈ ವೇಳೆ ಮಾತನಾಡಿ,ಸಭೆಯಲ್ಲಿ ಹರಿಹರ ಪೀಠದ ಜಗದ್ಗುರುಗಳು ಭಾಗಿಯಾಗಿದ್ದರು. ಹರಿಹರ ಪೀಠದ ಹರಜಾತ್ರೆ ಹರಮಾಲಾ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು.ನಾವೆಲ್ಲ ಕಾರ್ಯಕ್ರಮಕ್ಕೆ ಬರೋದಾಗಿ ಮಾತು ಕೊಟ್ಟಿದ್ದೇವೆ. ಒಕ್ಕೂಟಕ್ಕೆ ಸಂಬಂಧಪಟ್ಟಂತೆ ಯಾರು ಪ್ರೀತಿಯಿಂದ ಬರ್ತಾರೆ.ಅವರನ್ನು ಪ್ರೀತಿಯಿಂದ ಸ್ವಾಗತ ಮಾಡಿಕೊಳ್ತಿವಿ ಎಂದು ಮೊದಲೆ ಹೇಳಿದ್ದೆವು‌‌.ಹರಿಹರ ಶ್ರೀಗಳು ನಿಮಗೆ ನನ್ನ ಸಹಕಾರವಿದೆ ಎಂದು ಹೇಳಿದ್ದರು.ಕರೆದರೆ ಬರುತ್ತೇನೆ ಎಂದು ಹೇಳಿದ್ದರು.ಅವರ ಸಹಕಾರ ಕಂಡು
ನಾವೆಲ್ಲ ಸೇರಿ ಅವರನ್ನು ಕರೆದಿದ್ದೇವೆ ಈಗ ಅವರು ಒಕ್ಕೂಟಕ್ಕೆ ಬಂದಿದ್ದಾರೆ.ಮೂರನೇ ಪೀಠಕ್ಕೆ ವಚನಾನಂದ ಸ್ವಾಮೀಜಿ ಬೆಂಬಲ ನೀಡಬಹುದಾ ಎಂಬ ವಿಚಾರಕ್ಕೆ.ಹಿಂದೆ ಹರಿಹರ ಪೀಠದ ಮೂಲ ಸ್ವಾಮೀಜಿ ಮಹಾಂತ ಸ್ವಾಮೀಜಿಗಳೇ ಐದು ಪೀಠ ಆದರೆ ತಪ್ಪಿಲ್ಲ ಎಂದಿದ್ದರು.ಜಿಲ್ಲೆಯ ಜನರು ಮೂರನೇ ಪೀಠ ಬೇಕು ಎಂದರೆ.ಮೂರನೇ ಪೀಠ ಆಗುತ್ತದೆ ಎಂದು ಸಂಗನಬಸವ ಸ್ವಾಮೀಜಿ ಹೇಳಿದರು.

ಸದ್ಯಕ್ಕೆ ವಚನಾನಂದ ಸ್ವಾಮೀಜಿ ಪ್ರೀತಿಯಿಂದ ನಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದಾರೆ.ಮುಂದೆಯೂ ಇರುತ್ತಾರೆ.ವಚನಾನಂದ ಸ್ವಾಮೀಜಿ ಹಾಗೂ ಪಂಚಮಸಾಲಿ ಒಕ್ಕೂಟ ಸೇರಿ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಸೈಡ್ ಲೈನ್ ಮಾಡುವ ತಂತ್ರ ಎಂಬ ವಿಚಾರಕ್ಕೆ.ಕೂಡಲಸಂಗಮ ಸ್ವಾಮೀಜಿ ಅವರು ನಮ್ಮವರೆ.ನಮ್ಮ ಸಮುದಾಯದವರೆ,ಅವರನ್ಯಾಕೆ ನಾವು ಸೈಡ್ ಲೈನ್ ಮಾಡೋದು.ಅವರು ಪ್ರೀತಿಯಿಯಿಂದ ಬಂದರೆ ಸ್ವಾಗತ ಮಾಡಿಕೊಳ್ಳುತ್ತೇವೆ.ಅವರು ಕೂಡ ಸಮಾಜ ಕಟ್ಟಿದ್ದಾರೆ,ಯುವಕರನ್ನು ಕಟ್ಟಿದ್ದಾರೆ.ಸುಧಾರಣೆ ಮಾಡುತ್ತಿದ್ದಾರೆ, ಮಠ ಸುಧಾರಣೆ ಮಾಡುತ್ತಿದ್ದಾರೆ.ಅವರು ಬಂದರೆ ಖಂಡಿತ ಅವರಿಗೆ ಕಾಯಿ ಕೊಟ್ಟು ಸ್ವಾಗತ ಮಾಡಿಕೊಳ್ಳುತ್ತೇವೆ.ಒಕ್ಕೂಟದ ಜಾಗ ಖರೀದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು.ಒಕ್ಕೂಟದ ಯಾವುದೇ ಸ್ವಾಮೀಜಿಗಳು ರಾಜಕೀಯ ನಾಯಕರ ಹತ್ತಿರ ಹೋಗುವದಿಲ್ಲ. ನಮಗೆ ಯಾವ ರಾಜಕೀಯ ಧುರೀಣರು,ಮುಖಂಡರ ಬೆನ್ನೆಲುಬಿಲ್ಲ(ಬೆಂಬಲವಿಲ್ಲ)
ಸಣ್ಣಪುಟ್ಟ ಭಕ್ತರು, ಸಮಾಜದ ಸ್ವಾಮೀಜಿಗಳು ನಮ್ಮ ಜೊತೆ ಇದ್ದಾರೆ.ಜಾಗ ಖರೀದಿಸುವದಕ್ಕೆ ಹದಿನೆಂಟು ಇಪ್ಪತ್ತು ಲಕ್ಷ ರೂ ಬೇಕಾಗುತ್ತದೆ.ಕೆಲವೇ ದಿನದಲ್ಲಿ ಒಕ್ಕೂಟದ ಹೆಸರಲ್ಲಿ ಭೂಮಿ ಖರೀದಿಸುತ್ತೇವೆ ಎಂದು ಸಂಗನಬಸವ ಸ್ವಾಮೀಜಿ ಹೇಳಿದರು.ಸಭೆಯಲ್ಲಿ ೨೦ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿ, ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button