Breaking Newsಇತರ ಕ್ರೀಡೆಕ್ರೀಡೆ
ಪಿ.ವಿ ಸಿಂಧೂ ಜಯದ ಅಭಿಯಾನ

ಟೋಕಿಯೋ: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಟೋಕಿಯೋ ಒಲಿಂಪಿಕ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಗಳಿಸಿ ಮುನ್ನಡೆದಿದ್ದಾರೆ.
ಇಸ್ರೇಲ್ ನ ಕೆನಿಯಾ ಪೊಲಿಕರ್ಪೊವಾ ವಿರುದ್ಧ ನಡೆದ ಪಂದ್ಯದಲ್ಲಿ ಸಿಂಧೂ 21-7, 21-10 ಅಂತರದಲ್ಲಿ ಜಯ ಗಳಿಸಿದರು.
ರೋವಿಂಗ್ ನಲ್ಲಿ ಅರ್ಜುನ್ ಲಾಲ್ ಮತ್ತು ಅರವಿಂದ್ ಸಿಂಗ್ ಸೆಮಿಫೈನಲ್ ತಲುಪಿದ್ದಾರೆ. ಆದರೆ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಶೂಟರ್ ಗಳಾದ ಮನು ಬಾಕರ್ ಮತ್ತು ಯಶಸ್ವಿನಿ ದೆಸ್ವಾಲ್ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಪ್ರಧಾನ ಸುತ್ತು ತಲಪುವಲ್ಲಿ ವಿಫಲರಾಗಿದ್ದಾರೆ
