Breaking NewsLatestರಾಷ್ಟ್ರೀಯಸುದ್ದಿ

ಉಕ್ರೇನ್ ಮೇಲೆ ರಷ್ಯಾ ಯುದ್ಧ – 219 ಭಾರತೀಯರ ಏರ್ ಲಿಫ್ಟ್ : ಎಸ್.ಜೈಶಂಕರ್

ನವದೆಹಲಿ: ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ನಿಂದ 219 ಭಾರತೀಯರನ್ನು ಏರ್ ಲಿಫ್ಟ್ ಮಾಡಿರುವ ಮೊದಲ ವಿಮಾನ ಮುಂಬೈಗೆ ರೊಮೇನಿಯಾದಿಂದ ಹೊರಟಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಈ ಕುರಿತು ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಉಕ್ರೇನ್ ನಲ್ಲಿ ಸಿಲುಕಿದ 219 ಭಾರತೀಯರನ್ನು ರೊಮೇನಿಯಾದಿಂದ ಏರ್ ಇಂಡಿಯಾ ವಿಮಾನದ ಮೂಲಕ ಲಿಫ್ಟ್ ಮಾಡಲಾಗಿದೆ. ಮೊದಲ ವಿಮಾನ ರೊಮೇನಿಯಾದಿಂದ ಮುಂಬೈಗೆ ಹೊರಟಿದೆ ಎಂದು ತಿಳಿಸಿದ್ದಾರೆ.

ನಾವು ಉಕ್ರೇನ್ ನಲ್ಲಿರುವ ಭಾರತೀಯರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ತಂಡಗಳು ದಿನದ 24 ಗಂಟೆಯೂ ಭಾರತೀಯರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ನಾನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ರೊಮೇನಿಯಾದಿಂದ ಹೊರಟ ವಿಮಾನ ಇಂದು ಸಂಜೆ ಮುಂಬೈ ತಲುಪಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button