Breaking NewsLatestಕ್ರೈಂರಾಷ್ಟ್ರೀಯಸುದ್ದಿ
ಶ್ರೀಲಂಕಾ ನೌಕಾದಳದಿಂದ 16 ಭಾರತೀಯ ಮೀನುಗಾರರು ಅರೆಸ್ಟ್!

ಚೆನ್ನೈ, ತಮಿಳುನಾಡು : ಶ್ರೀಲಂಕಾ ನೌಕಾಪಡೆಯು ಮಂಗಳವಾರ ಮುಂಜಾನೆ ತಮಿಳುನಾಡು ಮೂಲದ 16 ಮೀನುಗಾರರನ್ನು ಬಂಧಿಸಿದೆ ಎಂದು ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ರಾಮೇಶ್ವರಂನ 16 ಮೀನುಗಾರರು ಬಂಧಿಸಿ, 3 ಬೋಟ್ಗಳನ್ನು ಶ್ರೀಲಂಕಾ ನೌಕಾಪಡೆಯು ಡೆಲ್ಫ್ಟ್ ದ್ವೀಪದ ಬಳಿ ಮುಂಜಾನೆ 2 ಗಂಟೆಗೆ ವಶಕ್ಕೆ ಪಡೆದಿದೆ ಎಂದು ಕ್ಯೂ ಬ್ರಾಂಚ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
`ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಅವರು ಮೀನುಗಳನ್ನು ಹಿಡಿಯುತ್ತಿದ್ದರು’, ಎಂದು ನೌಕಾದಳವು ಆರೋಪಿಸಿದೆ. ಕಳೆದ ಎರಡು ದಿನಗಳಲ್ಲಿ ಶ್ರೀಲಂಕಾದ ನೌಕಾದಳವು ಒಟ್ಟು 55 ಭಾರತೀಯ ಮೀನುಗಾರನನ್ನು ಬಂಧಿಸಿದೆ ಮತ್ತು ಒಟ್ಟು 8 ನೌಕೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.
