Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ

Video Viral: ಸಿದ್ದರಾಮೇಶ್ವರ ಜಾತ್ರೆಯಲ್ಲಿ ಸಿದ್ದರಾಮಯ್ಯ ವೀರ ಕುಣಿತ; ವಿಡಿಯೋ ಸಖತ್ ವೈರಲ್

ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರು ಆದ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತ್ತು. ಈ ಜಾತ್ರೆಗೆ ನಿನ್ನೆ ಸಿದ್ದರಾಮಯ್ಯ ಕೂಡ ಭೇಟಿ ನೀಡಿದರು. ಈ ವೇಳೆ ಗ್ರಾಮಸ್ಥರ ಜೊತೆಗೂಡಿ ಸಿದ್ದರಾಮಯ್ಯ ಹೆಜ್ಜೆ ಹಾಕಿದ್ರು.

ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಜಾನಪದ ವಾದ್ಯಗಳ ಹಿಮ್ಮೇಳಕ್ಕೆ ಸಿದ್ದರಾಮಯ್ಯ ಸ್ಟೆಪ್ಸ್ ಹಾಕಿದ್ರು. ಇದನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ನಡುವೆಯೇ ಸಿದ್ದರಾಮಯ್ಯ ಸಖತ್ ಸ್ಟೆಪ್ಸ್ ಹಾಕಿದ್ರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಪುತ್ರ ಯತೀಂದ್ರ, ಅಪ್ಪ ಪ್ರತಿ ವರ್ಷ ಜಾತ್ರೆ ವೇಳೆ ವೀರನ ಕುಣಿತ ಮಾಡೋದು ವಾಡಿಕೆ. ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡ್ತಾರೆ ಅಂತ ಅಂದು ಕೊಂಡಿರಲಿಲ್ಲ.ಅಪ್ಪ ಮೊದಲೇ ಹೇಳಿದ್ರು ನಾನು ಡ್ಯಾನ್ಸ್ ಮಾಡಲ್ಲ ಅಂತ. ಆದ್ರೆ ಜನರ ನೋಡಿ ಉತ್ಸಾಹ ಬಂದು ಅವರು ಸಹ ಹೋಗಿ ಡ್ಯಾನ್ಸ್ ಮಾಡಿದ್ರು. ಪ್ರತಿವರ್ಷ ಡ್ಯಾನ್ಸ್ ಮಾಡ್ತಿದ್ರು ಎಂದರು.

ಅಪ್ಪ ಶಾಲೆಯಲ್ಲಿಯೇ ವೀರನ ಕುಣಿತ ಕಲಿತಿದ್ರು. ಹಾಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ. ನನಗೆ ಈ ರೀತಿ ಕುಣಿಯೋ ಚಿಕ್ಕಂದಿನಿಂದಲೂ ಬಿಡಲಿಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button