Breaking NewsLatestರಾಜಕೀಯರಾಜ್ಯ
ಜಿಂದಾಲ್ನಿಂದ ವಾಪಸಾಗುತ್ತಿದ್ದಂತೆ ಸಿದ್ದರಾಮಯ್ಯರನ್ನು ಕೆಣಕಿದ ಬಿಜೆಪಿ

ಬೆಂಗಳೂರು: ಹತ್ತು ದಿನಗಳ ಕಾಲ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿಂದ ವಾಪಸಾಗುತ್ತಿದ್ದಂತೆ ರಾಜ್ಯ ಬಿಜೆಪಿ ಅವರ ಕಾಲೆಳೆಯುವ ಬಗೆಯಲ್ಲಿ ಟ್ವೀಟ್ ಮಾಡಿದೆ.
ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಪಕ್ಷದ ಒಳಜಗಳ ರಂಗು ಕಳೆದುಕೊಂಡಿತ್ತು ಎಂದಿರುವ ಬಿಜೆಪಿ, ಭ್ರಷ್ಟಾಧ್ಯಕ್ಷರ ವಿರುದ್ಧ ಸೆಣೆಸಲು ಆಯುಧ ಹರಿತ ಮಾಡಿಕೊಂಡಿದ್ದೀರಾ ಎಂದು ಕೇಳಿದೆ.
ಮತ್ತೊಂದು ಟ್ವೀಟ್ನಲ್ಲಿ ಕಳೆದ ಬಾರಿ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾಗ ಮೈತ್ರಿ ಸರ್ಕಾರ ಪತನಕ್ಕೆ ನೀವೇ ಮುಹೂರ್ತ ಇಟ್ಟಿದ್ದಿರಿ ಎಂದು ಕೆಣಕಿರುವ ರಾಜ್ಯ ಬಿಜೆಪಿ, ಈ ಸಲ ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾ ರೆಡಿಯಾಗಿದೆಯಾ ಎಂದು ವ್ಯಂಗ್ಯವಾಗಿ ಕೇಳಿದೆ.
