Breaking NewsLatestಬಾಲಿವುಡ್ಮನರಂಜನೆಸಿನಿಮಾ

ನಿರ್ದೇಶಕ ಗಿರೀಶ್ ಮಲಿಕ್ ಮಗ ಅಪಾರ್ಟ್​ಮೆಂಟ್ ಜಾರಿ ಬಿದ್ದು ಸಾವು

ಮುಂಬೈ: ಬಾಲಿವುಡ್ ಸಿನಿಮಾ ನಿರ್ದೇಶಕ ಗಿರೀಶ್ ಮಲಿಕ್ ಅವರ ಮಗ ಮನ್ನನ್‌ ಮುಂಬೈನ ಅಂಧೇರಿಯಲ್ಲಿರುವ ಅಪಾರ್ಟ್​ಮೆಂಟ್​​ನ 5 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಮೇಲಿನಿಂದ ಜಾರಿ ಬಿದ್ದ ಮನ್ನನ್​ನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿತ್ತು.

ಆದರೆ, ದುರದೃಷ್ಟವಶಾತ್ ಆತ ಬದುಕಲಿಲ್ಲ. ಬಾಲಿವುಡ್​ನಲ್ಲಿ ಸಂಜಯ್ ದತ್ ಅವರ ತೋರ್ಬಾಜ್ ಮನ್ ವರ್ಸಸ್ ಖಾನ್, ಜಲ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಗಿರೀಶ್ ಮಲಿಕ್ ನಟರೂ ಆಗಿದ್ದರು. ಅವರ ಮಗ ಮನ್ನನ್ ಶುಕ್ರವಾರ ತನ್ನ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದನಾ ಅಥವಾ ಈ ಘಟನೆಯ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯಾ? ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button